ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿವರ್ಷ ನಡೆಯುವ ಐತಿಹಾಸಿಕ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಶುರುವಾಗಿದೆ.
ಕೊರೊನಾ ಕಾಟದಿಂದ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಈ ಹಬ್ಬ ಈ ಬಾರಿ ಕಳೆಗಟ್ಟಿದೆ.
ನಾಳೆಯಿಂದ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯಲಿದೆ.
ಬಸವನಗುಡಿಯಲ್ಲಿ ಜನ ಸಾಗರವೇ ಸೇರಿದೆ. ಬೇರೆ ಬೇರೆ ಊರುಗಳಿಂದ ಸಾಕಷ್ಟು ವ್ಯಾಪಾರಿಗಳು ಆಗಮಿಸಿದ್ದು, ರಸ್ತೆಯುದ್ದಕ್ಕೂ ತರಹೇವಾರಿ ಕಡಲೆಕಾಯಿ ಇಡಲಾಗಿದೆ. ನಾಳೆ ಬೆಳಗ್ಗೆ ಕಾರ್ತಿಕ ಸೋಮವಾರದಂದು ಬಸವನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಬಳಿಕ 9 ಗಂಟೆಗೆ ದೇವಸ್ಥಾನದ ಮುಂಭಾಗ ಬಾಗಿಲ ಬಳಿ ಕಡಲೆಕಾಯಿ ಇಟ್ಟು ತುಲಭಾರ ಮಾಡಿ ಕಡಲೆಕಾಯಿ ಪರಿಷೆಗೆ ಉದ್ಘಾಟನೆ ಮಾಡಲಾಗುತ್ತದೆ.
ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿಕೊಂಡು ಈ ಬಾರಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.