ಕೊರೊನಾ ಪಾಸಿಟಿವ್ ಕಂಡು ಬಂದಿರುವ ವೈದ್ಯನಿಂದ 795 ಜನರಿಗೆ ಚಿಕಿತ್ಸೆ ನೀಡಲಾಗಿತ್ತು ಎಂಬ ಭಯಾನಕ ವಿಷಯ ಹೊರಬಿದ್ದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಮೂಡಿಗೆರೆ ತಾಲ್ಲೂಕಿನ ವೈದ್ಯ ಸುಮಾರು 795 ಜನರಿಗೆ ಚಿಕಿತ್ಸೆ ನೀಡಿದ್ದರು. ಅವರೆಲ್ಲರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುವ ಕೆಲಸ ಪ್ರಾರಂಭವಾಗಿದೆ ಎಂದು ಶಾಸಕ ಎಂ .ಕೆ . ಪ್ರಾಣೀಶ್ ತಿಳಿಸಿದ್ದಾರೆ.
ಕೊರೊನಾ ಬಂದಿರುವ ವೈದ್ಯರಿಂದ ಚಿಕಿತ್ಸೆ ಪಡೆದವರಿಗೆ ಮೂಡಿಗೆರೆ, ಬಣಕಲ್ ಸುತ್ತ ಮುತ್ತ ಹಾಸ್ಟೆಲ್ ಗಳಲ್ಲಿ ಕ್ವಾರಂ ಟೈನ್ ಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನತೆ ಆತಂಕ ಪಡುವುದು ಬೇಡ. ಕ್ವಾರಂಟೈನ್ ಆದವರಿಗೆ ಕೊರೊನಾ ಇದೆ ಎಂದು ಅರ್ಥವಲ್ಲ, ಮುಂಜಾಗ್ರತೆ ಕ್ರಮ ಅಷ್ಟೇ ಎಂದರು.