Publish Date: Wed, 20 May 2020 (10:27 IST)
Updated Date: Wed, 20 May 2020 (10:29 IST)
ಯಾದಗಿರಿ : ಕ್ವಾರಂಟೈನ್ ನಲ್ಲಿದ್ದ ಕಾರ್ಮಿಕನೊಬ್ಬ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ ಹುಣಸಗಿಯ ಪರತನಾಯ್ಕ್ ತಾಂಡಾದಲ್ಲಿ ನಡೆದಿದೆ.
ಮಹಾರಾಷ್ಟ್ರದಿಂದ ಬಂದಿದ್ದ ಕಾರ್ಮಿಕನನ್ನು ಕ್ವಾರಂಟೈನ್ ನಲ್ಲಿಡಲಾಗಿತ್ತು. ಆದರೆ ಆತ ಕ್ವಾರಂಟೈನ್ ನಿಂದ ಪರಾರಿಯಾಗಲು ಯತ್ನಿಸಿದಾಗ ಕೊಡೆಕಲ್ ಠಾಣೆ ASI ಭೀಮಾಶಂಕರ್ ಹಿಡಿಯಲು ಹೋಗಿದ್ದಾರೆ. ಆಗ ಆತ ತನ್ನ ಕುಟುಂಬಸ್ಥರ ಜತೆ ಸೇರಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಪೊಲೀಸ್ ಅಧಿಕಾರಿಯ ಕಣ್ಣಿಗೆ ಗಾಯವಾಗಿದೆ ಎನ್ನಲಾಗಿದೆ.