Publish Date: Mon, 23 Mar 2020 (19:23 IST)
Updated Date: Mon, 23 Mar 2020 (19:26 IST)
ಕೋವಿಡ್ – 19 ನಿಂದಾಗಿ ಕೋಳಿ, ಕುರಿ ನಂತರ ಇದೀಗ ಮೀನಿಗೂ ಸಂಚಕಾರ ಬಂದೊದಗಿದೆ.
ಕೋವಿಡ್ 19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾ.24 ರಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮೀನುಗಾರಿಕಾ ಚಟುವಟಿಕೆ ಬಂದ್ ಮಾಡುವಂತೆ ಮೀನುಗಾರಿಕಾ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಐದು ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಓಡಾಡುವುದು ಅಥವಾ ಇನ್ನಿತರ ಚಟುವಟಕೆಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಆದರೆ ಬಂದರು ಪ್ರದೇಶದಲ್ಲಿ ಮೀನುಗಾರಿಕಾ ಚಟುವಟಿಕೆ ನಡೆಸುವುದರಿಂದ ಹೆಚ್ಚಿನ ಜನ ಸೇರಲು ಅವಕಾಶವಾಗುತ್ತದೆ.
ತತ್‌ಕ್ಷಣ ಜಾರಿಯಾಗುವಂತೆ ಎಲ್ಲಾ ಯಾಂತ್ರಿಕೃತ ಬೋಟ್ ಮಾಲಿಕರು, ಮೀನುಗಾರಿಕೆ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಬೇಕು. ಮೀನು ಖರೀದಿಸುವುದು, ಮೀನು ಸಾಗಾಣಿಕೆ ಮತ್ತು ಇನ್ನಿತರ ಚಟುವಟಿಕೆಗಳನ್ನು ಸದ್ಯ ನಡೆಸದಂತೆ ಅವರು ಸೂಚಿಸಿದ್ದಾರೆ.