Publish Date: Thu, 11 Jun 2020 (10:40 IST)
Updated Date: Thu, 11 Jun 2020 (10:41 IST)
ಬೆಂಗಳೂರು : ಬಿಎಂಟಿಸಿ ಬಸ್ ಸಿಬ್ಬಂದಿಗೆ ಕೊರೊನಾ ಶಾಕ್. ಚಾಲಕನೊಬ್ಬನಿಗೆ ಕೊರೊನಾ ಸೋಂಕು ಶಂಕೆ ವ್ಯಕ್ತವಾಗಿದೆ.
ಡಿಪೋ ಸಂಖ್ಯೆ 24ರ ಸಿಬ್ಬಂದಿಗೆ ಕೊರೊನಾ ಸೋಂಕು ಇರುವ ಶಂಕೆ ವ್ಯಕ್ತವಾಗಿದ್ದು, ಚಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನಿಗೆ ಕೊರೊನಾ ಹಿನ್ನಲೆಯಲ್ಲಿ ಸಹೋದ್ಯೋಗಿಗಳಿಗೆ ಹಾಗೂ ಪ್ರಯಾಣಿಕರಿಗೆ ಆತಂಕ ಹೆಚ್ಚಾಗಿದೆ. ಅಲ್ಲದೇ ಬಸ್ ಬೆಂಗಳೂರಿನ ಹಲವು ಮಾರ್ಗದಲ್ಲಿ ಸಂಚಾರ ಮಾಡಿದೆ ಎನ್ನಲಾಗಿದೆ.