ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಅದರಲ್ಲೂ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಹೋಗಿ ಬರುವವರಿಗೆ ಕಠಿಣ ನಿಯಮ ಜಾರಿಗೆ ತಂದಿದೆ. ಹೊರರಾಜ್ಯದಿಂದ ಬೆಂಗಳೂರಿಗೆ ಬರುವವರು ಕಡ್ಡಾಯವಾಗಿ ಕೊರೋನಾ ಪರೀಕ್ಷೆ ವರದಿಯ ಜೊತೆಗೇ ಬರಬೇಕು. ಒಂದು ವೇಳೆ ಕೊರೋನಾ ಲಕ್ಷಣಗಳಿದ್ದರೆ ಹೋಂ ಕ್ವಾರಂಟೈನ್ ಗೊಳಪಡಿಸಲಾಗುತ್ತದೆ. ಅಂತಹವರಿಗೆ ಕೈಗೆ ಸೀಲ್ ಮಾಡಲಾಗುವುದು.
ಇನ್ನು, ಇದಲ್ಲದೆ, ಸಭೆ ಸಮಾರಂಭಗಳಿಗೆ 200 ಜನರಿಗಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ. ಸಾರ್ವಜನಿಕರೂ ಕೊರೋನಾ ನಿಯಂತ್ರಿಸಲು ಸಹಕರಿಸಬೇಕು. ಸರ್ಕಾರ ಮಾಡಿರುವ ಹೊಸ ನಿಯಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.