ಸಂಸದರಾಗಿರುವ ತಂದೆ ಹಾಗೂ ಶಾಸಕನಾಗಿರುವ ಮಗನಿಗೆ ಕೊರೊನಾ ಕಾಣಿಸಿಕೊಂಡಿದೆ.
ಅಂದಹಾಗೆ ಈ ತಂದೆ ಮಗ ಜೋಡಿ ರಾಜಕೀಯದಲ್ಲಿದ್ದರೂ ವೃತ್ತಿಯಲ್ಲಿ ವೈದ್ಯರೇ ಆಗಿದ್ದಾರೆ.
ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಹಾಗೂ ಅವರ ಮಗ ಚಿಂಚೋಳಿ ಮತಕ್ಷೇತ್ರದ ಶಾಸಕ ಡಾ. ಅವಿನಾಶ್ ಜಾಧವ್ಗೆ ಕೋವಿಡ್ – 19 ದೃಢಪಟ್ಟಿದೆ.
ತಮ್ಮ ಸಂಪರ್ಕದಲ್ಲಿ ಬಂದವರು ತಪ್ಪದೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಂಸದ ಜಾಧವ ಪೋಸ್ಟ್ ಮಾಡಿದ್ದಾರೆ.
ಇನ್ನು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಸಂಸದ ಹಾಗೂ ಶಾಸಕ ಜಾಧವ್ ಇಬ್ಬರೂ ದಾಖಲಾಗಿದ್ದಾರೆ.