Webdunia - Bharat's app for daily news and videos

Install App

ಕೊರೊನಾ ಹಾಟ್ ಸ್ಪಾಟ್ ಮುಂಬೈನಿಂದ 1181 ಜನ ರಾಜ್ಯಕ್ಕೆ ಆಗಮನ

Webdunia
ಗುರುವಾರ, 14 ಮೇ 2020 (18:11 IST)
ಮುಂಬೈನಿಂದ ರಾಜ್ಯದ ಒಂದೇ ಜಿಲ್ಲೆಗೆ 1181 ಜನರು ಆಗಮಿಸಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ.

ಕೊರೋನಾ ಲಾಕ್ ಡೌನ್ 3.0 ಸಡಿಲಿಕೆ ಹಿನ್ನೆಲೆಯಲ್ಲಿ ಬೇರೆ ರಾಜ್ಯದಲ್ಲಿ ಸಿಲುಕಿದ್ದ ಕಲಬುರಗಿ ಜಿಲ್ಲೆಯ 12025 ಜನ ವಲಸಿಗ ಕಾರ್ಮಿಕರು ಜಿಲ್ಲೆಯ ಅಂತರ ರಾಜ್ಯ ಗಡಿಗಳಿಂದ ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಖಜೂರಿ, ಹೀರೊಳ್ಳಿ, ಕಿಣ್ಣಿಸಡಕ್, ಬಳ್ಳೂರಗಿ, ಮಿರಿಯಾಣ ಹಾಗೂ ರಿಬ್ಬನಪಲ್ಲಿ ಗಡಿಗಳ ಮೂಲಕ ಈ ವಲಸಿಗರು ಆಗಮಿಸಿದ್ದಾರೆ. ಇವರೆಲ್ಲರಿಗೂ ಗಡಿಯಲ್ಲಿಯೆ ಆರೋಗ್ಯ ತಪಾಸಣೆ ಮಾಡಿ ವಲಸಿಗರ ಊರು ಸಮೀಪದಲ್ಲಿಯೆ ಸರ್ಕಾರಿ ಕ್ವಾರಂಟೈನ್ ಮಾಡಲಾಗಿದೆ ಎಂದರು.

ಮುಂಬೈನಿಂದ ಶ್ರಮಿಕ್ ರೈಲಿನ ಮೂಲಕ 1181 ಜನ ವಲಸಿಗ ಕಾರ್ಮಿಕರು ಆಗಮಿಸಿದ್ದು, ಇದರಲ್ಲಿ ಯಾದಗಿರಿ ಜಿಲ್ಲೆಯ 242 ಮತ್ತು ವಿಜಯಪುರ ಜಿಲ್ಲೆಯ 22 ವಲಸಿಗರು ಸೇರಿದ್ದಾರೆ. ಹೊರ ಜಿಲ್ಲೆಯವರಿಗೆ ಆರೋಗ್ಯ ತಪಾಸಣೆ ಮಾಡಿ ಬಸ್ ಮೂಲಕ ಜಿಲ್ಲೆಗಳಿಗೆ ಕಳುಹಿಸಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments