ದೇಶ ಹಾಗೂ ರಾದ್ಯಾದ್ಯಂತ ಲಾಕ್‍ಡೌನ್ ಅನ್ವಯ ನಿರ್ಭಂಧ ಇದ್ದು, ಜೀವನಾವಶ್ಯಕ ವಸ್ತು ಮತ್ತು ಸರಬರಾಜುವಿಗೆ ಯಾವುದೇ ತೊಂದರೆ ಇರುವುದಿಲ್ಲ.
ಹೀಗಂತ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ತಿಳಿದ್ದಾರೆ. ತರಕಾರಿ, ದಿನಸಿ ಅಂಗಡಿಗಳು(ಕಿರಾಣಿ ಅಂಗಡಿ)ಗಳಿಗೆ ಮತ್ತು ಹಣ್ಣು, ಹೂ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈಗಾಗಲೇ ತಳ್ಳುವ ಗಾಡಿಗಳ ಮೂಲಕ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಸಲಾಗಿದೆ.
ಇನ್ನು ಮುಂದೆ ನಗರದಾದ್ಯಂತ ತೋಟಗಾರಿಕೆ ಇಲಾಖೆ ಮೇಲ್ವಿಚಾರಣೆಯಲ್ಲಿ ನಗರದ 10 ಭಾಗಗಳಲ್ಲಿ ಹಾಪ್‍ಕಾಮ್ಸ್ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಮಳಿಗೆಗಳ ಮೂಲಕ ಮಾರಾಟಕ್ಕೂ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ತೋಟಗಾರಿಕೆ ಇಲಾಖೆ ವ್ಯಾಪ್ತಿಯ 2 ಸುಜಲಾ ವಾಹನಗಳ ಮೂಲಕವು ನಗರದ ಆಯ್ಕೆ ಮಾಡಿದ ಬಡಾವಣೆಗಳಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.