Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೇಷನ್ ಇನ್ಮುಂದೆ ಬಯೋಮೆಟ್ರಿಕ್ ಬದಲು ಮೊಬೈಲ್ ಓ.ಟಿ.ಪಿ ಮೂಲಕ ಸಿಗುತ್ತೆ

ರೇಷನ್ ಇನ್ಮುಂದೆ ಬಯೋಮೆಟ್ರಿಕ್ ಬದಲು ಮೊಬೈಲ್ ಓ.ಟಿ.ಪಿ ಮೂಲಕ  ಸಿಗುತ್ತೆ
ಕಲಬುರಗಿ , ಬುಧವಾರ, 25 ಮಾರ್ಚ್ 2020 (17:32 IST)
ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಬಯೋ ಮೆಟ್ರಿಕ್ ಕ್ಯಾನ್ಸಲ್ ಮಾಡಲಾಗಿದೆ.

ಜೀವಮಾಪನ (ಬಯೋ ಮೆಟ್ರಿಕ್) ಮೂಲಕ ಪಡಿತರ ವಿತರಿಸುವುದರ ಬದಲು ಆಧಾರ್ ಆಧಾರಿತ ಮೊಬೈಲ್ ಓ.ಟಿ.ಪಿ. ಮೂಲಕ ಪಡಿತರ ವಿತರಣೆಗೆ ಕ್ರಮ ವಹಿಸುವಂತೆ ಕಲಬುರಗಿ ಜಿಲ್ಲಾಧಿಕಾರಿ ಶರತ ಬಿ., ಪಡಿತರ ಅಂಗಡಿದಾರರಿಗೆ ಸೂಚನೆ‌ ನೀಡಿದ್ದಾರೆ.
ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ ಆಧಾರ್‌ನಲ್ಲಿ ನೋಂದಾಯಿಸಲ್ಪಟ್ಟಿದ್ದರೆ ಮಾತ್ರ ಅಂತಹ ಪಡಿತರ ಚೀಟಿದಾರರ ಮೊಬೈಲ್‍ಗೆ ಓ.ಟಿ.ಪಿ ಬರಲಿದೆ. ಒ.ಟಿ.ಪಿ ಯನ್ನು ನೋಂದಣಿ ಮಾಡಿಕೊಂಡು‌ ಎಫ್.ಪಿ.ಎಸ್.ಅಂಗಡಿಯವರು ಪಡಿತರದಾರರಿಗೆ ಪಡಿತರ ವಿತರಿಸಬೇಕು.

ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ ಆಧಾರ್‌ನಲ್ಲಿ ನೋಂದಣಿಯಾಗದೇ ಇದ್ದ ಸಂದರ್ಭದಲ್ಲಿ ಪಡಿತರ ಚೀಟಿದಾರರು ತರುವ ಮೊಬೈಲ್ ಸಂಖ್ಯೆಯನ್ನು ವರ್ತಕರಿಗೆ ನೀಡಬೇಕು. ಆಗ ನ್ಯಾಯಬೆಲೆ ಅಂಗಡಿ ವರ್ತಕರು ಮೋಬೈಲ್‌ ಸಂಖ್ಯೆ ದೃಢೀಕರಣ ಮಾಡಿಕೊಂಡು ಅದನ್ನು ದತ್ತಾಂಶದಲ್ಲಿ ನಮೂದಿಸಿದಾಗ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ. ರವಾನೆಯಾಗುತ್ತದೆ. ಇದನ್ನು ಬಳಸಿಕೊಂಡು ಪಡಿತರ ವಿತರಿಸಬಹುದು.  



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಎಫೆಕ್ಟ್ : ಭಾರತ 21 ದಿನ ಲಾಕ್ ಡೌನ್ – ಕಲಬುರಗಿಯಲ್ಲಿ ಒಂದು ತಿಂಗಳು ಲಾಕ್ ಡೌನ್