ಕೊವೀಡ್ -19 ಅನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ 25 ಸಾವಿರ ಕುಟುಂಬಗಳಿಗೆ ಪ್ರತಿದಿನ ತಲಾ 1 ಲೀಟರ್ ಹಾಲು ವಿತರಣೆ ಮಾಡಲಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿರುವ 11 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 129 ಕೊಳಚೆ ಪ್ರದೇಶದ 25,000 ಕುಟಂಬಗಳಿಗೆ ತಲಾ 1 ಲೀ. ಹಾಲು ವಿತರಣೆ ಮಾಡಲಾಗುತ್ತಿದೆ.
ಕೊಳಚೆ ಪ್ರದೇಶದಲ್ಲಿನ ಮನೆಗಳಿಗಳಿಗೆ ಸರ್ಕಾರದ ಆದೇಶದನ್ವಯ ಪ್ರತಿ ಮನೆಗೆ ಒಂದು ಲೀಟರ್ ಹಾಲನ್ನು ತುಮೂಲ್ ಮೂಲಕ ಒದಗಿಸಲಾಗುತ್ತಿದ್ದು, ಹಾಲು ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರತಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ.
ಈ ಅಧಿಕಾರಿಗಳು ಜಿಲ್ಲೆಯ ರೆಡ್ ಕ್ರಾಸ್, ಲಯನ್ಸ್ ಹಾಗು ರೋಟರಿ ಕ್ಲಬ್ ಹಾಗೂ ಸ್ವಯಂ ಸೇವಕರ ಮೂಲಕ ಪ್ರತಿ ಕೊಳಚೆ ಪ್ರದೇಶದಲ್ಲಿನ ಮನೆಗಳಿಗೆ ತಲುಪಿಸಲಿದ್ದಾರೆ ಎಂದು ಜಿಲ್ಲಾ ಯೋಜನಾ ನಿರ್ದೇಶಕ ರಂಗಸ್ವಾಮಿ ತಿಳಿಸಿದ್ದಾರೆ.