Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಮಾಜ್ ಮಾಡಿದ 22 ಜನರ ಮೇಲೆ ಕೇಸ್ ದಾಖಲು

ನಮಾಜ್ ಮಾಡಿದ 22 ಜನರ ಮೇಲೆ ಕೇಸ್ ದಾಖಲು
ಕಾರವಾರ , ಗುರುವಾರ, 2 ಏಪ್ರಿಲ್ 2020 (17:23 IST)
ದಿಲ್ಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಈ ಜಿಲ್ಲೆಯಿಂದ ಎಂಟು ಜನರು ಪಾಲ್ಗೊಂಡಿದ್ದರು ಎಂದು ಎಸ್ ಪಿ ತಿಳಿಸಿದ್ದಾರೆ.

ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿಕೆ ನೀಡಿದ್ದು, ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ದಾಂಡೇಲಿ, ಕುಮಟಾ ಮತ್ತು ಹೊನ್ನಾವರ ತಾಲೂಕುಗಳಿಂದ ಒಟ್ಟು ಎಂಟು ಜನರು ಭಾಗವಹಿಸಿದ್ದರು. ಇವರೆಲ್ಲರನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, ಅವರೆಲ್ಲರನ್ನೂ ಹೋಮ್ ಕೊರಂಟೈನ್‌ನಲ್ಲಿರುವಂತೆ ಸೂಚನೆ ನೀಡಲಾಗಿದೆ ಎಂದರು. 

ಹಳಿಯಾಳದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಾಮೂಹಿಕ ನಮಾಜ್‌ನಲ್ಲಿ ಭಾಗವಹಿಸಿದ್ದ 22 ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ವ್ಯಕ್ತಿಯೊಬ್ಬರ ಹೆಸರು ಹಾಕಿ ಕೋವಿಡ್-19 ಸೊಂಕು ತಗುಲಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ದಾಂಡೇಲಿಯ ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಎಫೆಕ್ಟ್ : ವಿಡಿಯೋ ಸಂವಾದದಲ್ಲಿ ಸಚಿವ ಹೇಳಿದ್ದೇನು?