Publish Date: Fri, 10 Apr 2020 (09:35 IST)
Updated Date: Fri, 10 Apr 2020 (09:37 IST)
ಬೆಂಗಳೂರು : ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಇಂದಿನಿಂದಲೇ ಸೀಲ್ ಡೌನ್ ಶುರುವಾಗಿದೆ.
ಬೆಂಗಳೂರಿನಲ್ಲಿ ಹಂತ ಹಂತವಾಗಿ ಸೀಲ್ ಡೌನ್ ಶುರುವಾಗಿದ್ದು, ಪಾದರಾಯನಪುರ, ಕತ್ರಿಗುಪ್ಪೆ ಸೇರಿ ಹಲವು ಏರಿಯಾಗಳು ಸಂಪೂರ್ಣ ಲಾಕ್ ಆಗಲಿದೆ ಎನ್ನಲಾಗಿದೆ.
ಸೀಲ್ ಡೌನ್ ಆದ್ರೆ ಏರಿಯಾಕ್ಕೆ ಏರಿಯಾವೆ ಸ್ತಬ್ಧ ಆಗಲಿದೆ. ಅಗತ್ಯ ವಸ್ತುಗಳ ಖರೀದಿಗೂ ಸಮಸ್ಯೆ ಆಗಲಿದೆ. ಅಗತ್ಯ ವಸ್ತುಗಳನ್ನು ಆನ್ ಲೈನ್ ಮೂಲಕವೇ ಖರೀದಸಬೇಕಾಗುತ್ತದೆ.