Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕೊರೋನಾ ಎರಡನೇ ಅಲೆ ಮುಗಿಯಿತು, ಲಾಕ್ ಡೌನ್ ನಿರ್ಬಂಧಗಳೂ ಸಡಿಲವಾಗಿದೆ. ಈ ಹಿನ್ನಲೆಯಲ್ಲಿ ಜನರೂ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ. ಪ್ರವಾಸೀ ತಾಣಗಳು ತುಂಬಿ ತುಳುಕುತ್ತಿವೆ. ಸಾಮಾಜಿಕ ಅಂತರ ಮರೆತಿದ್ದಾರೆ.
ಹೀಗಾಗಿ ಈಗ ಮತ್ತೆ ಪ್ರಕರಣಗಳಲ್ಲಿ ನಿಧಾನಗತಿಯಲ್ಲಿ ಏರಿಕೆ ಕಂಡುಬರುತ್ತಿದೆ. ಇದರಿಂದಾಗಿ ಕೊರೋನಾ ಮೂರನೇ ಅಲೆ ಖಚಿತ ಎಂದೇ ಹೇಳಲಾಗುತ್ತಿದೆ. ಇದು ಕೇಂದ್ರ ಸರ್ಕಾರವನ್ನು ಆತಂಕಕ್ಕೆಡೆಮಾಡಿದೆ.
ಪ್ರವಾಸೀ ತಾಣಗಳೇ ಪ್ರಮುಖ ಅಪಾಯ ತಾಣಗಳಾಗುತ್ತಿರುವುದು ವಿಪರ್ಯಾಸ. ಲಾಕ್ ಡೌನ್ ನಿಂದಾಗಿ ದಿನಗಟ್ಟಲೇ ಮನೆಯಲ್ಲೇ ಕೂತಿದ್ದ ಜನ ಈಗ ತಂಡೋಪತಂಡವಾಗಿ ಆಗಮಿಸುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ. ಹೀಗಾಗಿ ಈಗಿಂದಲೇ ಮೂರನೇ ಅಲೆ ಎದುರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.