Publish Date: Thu, 25 Jun 2020 (21:01 IST)
Updated Date: Thu, 25 Jun 2020 (21:03 IST)
ಕೊರೊನಾ ವೈರಸ್ ನಿರ್ಮೂಲನೆಗೆ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಕಂಡುಹಿಡಿದಿರುವ ಔಷಧ ಮಾರಾಟಕ್ಕೆ ಹಲವೆಡೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ.
ಪತಂಜಲಿ ಸಂಸ್ಥೆಯ ನೂತನ ಔಷಧವನ್ನು ಏಳು ದಿನಗಳ ಕಾಲ ತೆಗೆದುಕೊಂಡರೆ ಕೊರೊನಾ ವೈರಸ್ ನಿಂದ ಮನುಷ್ಯರು ಗುಣಮುಖರಾಗುತ್ತಾರೆ ಎಂದು ಬಾಬಾ ರಾಮದೇವ್ ಹೇಳಿದ್ದರು.
ಆದರೆ ಆ ಔಷಧ ತಯಾರಿಸಲು ಹಾಗೂ ಪ್ರಯೋಗ ಮಾಡಲು ರಾಜಸ್ಥಾನ ಸರಕಾರದಿಂದ ಅನುಮತಿ ಪಡೆದಿಲ್ಲ.
ಹೀಗಂತ ರಾಜಸ್ಥಾನದ ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದು, ರಾಜಸ್ಥಾನದಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರು ಕೊರೊನಾ ನಿರ್ಮೂಲನೆಗೆ ಬಿಡುಗಡೆ ಮಾಡಿರುವ ಔಷಧವನ್ನು ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.