Publish Date: Sun, 19 Dec 2021 (16:48 IST)
Updated Date: Sun, 19 Dec 2021 (16:54 IST)
ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಅಬ್ಬರ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓಮಿಕ್ರಾನ್ ಬ್ಲಾಸ್ಟ್ ಆಗಿದ್ದು, ಜಿಲ್ಲೆಯಲ್ಲಿ ಐವರು ವಿದ್ಯಾರ್ಥಿಗಳಿಗೆ ರೂಪಾಂತರಿ ವೈರಸ್ ಓಮಿಕ್ರಾನ್ ಅಟ್ಯಾಕ್ ಆಗಿದೆ.ಬೆಂಗಳೂರು, ಬೆಳಗಾವಿ ಆಯ್ತು ಇದೀಗ ಕರಾವಳಿಗೆ ಎಂಟ್ರಿ ಕೊಟ್ಟಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಓಮಿಕ್ರಾನ್ ಟಾರ್ಗೆಟ್ ಮಾಡುತ್ತಿದೆ. ದಕ್ಷಿಣ ಕನ್ನಡದ ಐವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್ ಸೋಂಕು ಧೃಢವಾಗಿದ್ದು. ಬಂಟ್ವಾಳದ ವಸತಿ ನಿಲಯದಲ್ಲಿದ್ದ 14 ವಿದ್ಯಾರ್ಥಿನಿಯರಿಗೆ ಕೊರೋನಾ ಪತ್ತೆಯಾಗಿದ್ದು,
14 ವಿದ್ಯಾರ್ಥಿನಿಯರ ಪೈಕಿ ನಾಲ್ವರಿಗೆ ಓಮಿಕ್ರಾನ್ ದೃಢಪಟ್ಟಿದೆ, ಸೋಂಕಿತ ನಾಲ್ವರಿಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಮತ್ತೊಂದು ಕಾಲೇಜಿನಲ್ಲಿ 19 ವಿದ್ಯಾರ್ಥಿನಿಯರಿಗೆ ಕೊರೋನಾ ಪತ್ತೆಯಾಗಿದೆ. 19 ಮಂದಿಯಲ್ಲಿ ಒಂದು ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಇಂಗ್ಲೆಂಡ್ನಿಂದ ವಾಪಸ್ ಆಗಿದ್ದ ಯುವತಿಗೂ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
geetha
Publish Date: Sun, 19 Dec 2021 (16:48 IST)
Updated Date: Sun, 19 Dec 2021 (16:54 IST)