Publish Date: Wed, 15 Apr 2020 (19:02 IST)
Updated Date: Wed, 15 Apr 2020 (19:04 IST)
ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯ ಸಿಗದ ಕಾರಣ ಮದ್ಯವ್ಯಸನಿಗಳು ಕುಡಿತಕ್ಕಾಗಿ ಬಾರ್ ಗೋಡೆ ಕೊರೆದಿದ್ದಾರೆ.
ಬಾರ್ ನಲ್ಲಿದ್ದ ಅಪಾರ ಪ್ರಮಾಣ ಮದ್ಯ ಕಳುವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬೆಳಗ್ಗೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಬಾಲಾಜಿ ಟಾಕೀಸ್ ಮುಂಭಾಗ ಇರುವ ಬಾಲಾಜಿ ವೈನ್ ಶಾಪ್ ಅಂಗಡಿಯ ಗೋಡೆ ಕೊರೆದಿರುವ ದುಷ್ಕರ್ಮಿಗಳು ಕೈಗೆ ಸಿಕ್ಕಿದಷ್ಟು ಅಪಾರ ಪ್ರಮಾಣದ ಮದ್ಯ ದೋಚಿ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.