Publish Date: Thu, 10 Nov 2022 (18:13 IST)
Updated Date: Thu, 10 Nov 2022 (18:16 IST)
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತಾಗಿ ಅವಹೇಳನಕಾರಿ ಮಾತು ಹೇಳಿದ ಕುರುಬ ನಾಯಕ ಮುಕುಡಪ್ಪ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.ವಿಜಯನಗರದಲ್ಲಿರುವ ಮುಕುಡಪ್ಪ ಮನೆಯ ಮುಂದೆ ಪ್ರತಿಭಟಿಸುವುದಲ್ಲದೇ ಅವರ ಮನೆಗೆ ಮುತ್ತಿಗೆ ಹಾಕಿ ಅಸಾಮಾಧಾನ ಹೊರಹಾಕಿದ್ದಾರೆ.ಅಲ್ಲದೇ ಅವರ ವಿರುದ್ಧ ಧಿಕ್ಕಾರ ಘೋಷಣೆ ಕೂಗುವ ಮೂಲಕ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.