Publish Date: Sun, 22 Apr 2018 (10:06 IST)
Updated Date: Sun, 22 Apr 2018 (10:10 IST)
ಬೆಂಗಳೂರು: ಕೆಲವರಿಗೆ ಟಿಕೆಟ್ ಸಿಗದೇ ಚಡಪಡಿಸುತ್ತಿದ್ದರೆ, ರೆಬಲ್ ಸ್ಟಾರ್ ಅಂಬರೀಷ್ ಮಾತ್ರ ಟಿಕೆಟ್ ಸಿಕ್ಕು, ಬಿ ಫಾರಂ ಮನೆಗೇ ಕಳುಹಿಸಿದರೂ ಚುನಾವಣೆಗೆ ಸ್ಪರ್ಧಿಸಲು ಮೀನ ಮೇಷ ಎಣಿಸುತ್ತಿದ್ದಾರೆ.
ಅತ್ತ ಸಿಎಂ ಸಿದ್ದರಾಮಯ್ಯ ಕೂಡಾ ನೇರವಾಗಿ ಅಂಬರೀಷ್ ಜತೆ ಮಾತುಕತೆ ನಡೆಸಿ ಮನ ಒಲಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತಮ್ಮ ಆಪ್ತ ಕೆಜೆ ಜಾರ್ಜ್ ಮೂಲಕ ಮಾತುಕತೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಚುನಾವಣೆಗೆ ಸ್ಪರ್ಧಿಸಲು ಹಣ ಯಾರು ತರ್ತಾರೆ ಎಂದು ಅಂಬರೀಷ್ ತಮ್ಮ ಆಪ್ತರ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಂಬರೀಷ್ ಚುನಾವಣಾ ಖರ್ಚನ್ನು ಪಕ್ಷವೇ ಭರಿಸುವ ಭರವಸೆಯನ್ನು ಕೊಡಲು ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಅಂಬರೀಷ್ ನಿರ್ಧಾರ ಏನಿರಬಹುದು ಎಂಬ ಕುತೂಹಲ ಮೂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.