ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಮುಸ್ಲಿಂ ಮತ ವಿಭಜನೆ ಆಗುವುದನ್ನು ತಪ್ಪಿಸಲು ರಾಜ್ಯ ಕಾಂಗ್ರೆಸ್ ಅಸಾವುದ್ದೀನ್ ಒವೈಸಿ ನೇತೃತ್ವದ ಐಎಂಐ ಮತ್ತು ಎಸ್ ಡಿಪಿ ಜತೆ ಮೈತ್ರಿಗೆ ಮುಂದಾಗಿದೆಯೇ?
ಹೀಗೊಂದು ಸುದ್ದಿ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಮುಸ್ಲಿಂ ಮತ ವಿಭಜನೆಯಾಗದಂತೆ ತಡೆಯಲು ಮುಸ್ಲಿಂ ನಾಯಕರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ನಿಂದ ಬಂಡಾಯ ಬಾವುಟ ಹಾರಿಸಿ ಕಾಂಗ್ರೆಸ್ ಪಾಳಯಕ್ಕೆ ಬಂದಿರುವ ಜಮೀರ್ ಅಹಮ್ಮದ್ ರನ್ನು ಈ ಕೆಲಸಕ್ಕೆ ನಿಯೋಜಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಎಸ್ ಡಿಪಿ ಮತ್ತು ಐಎಂಐ ಪಕ್ಷದ ಜತೆ ಸಂಧಾನ ಮಾಡುವ ಹೊಣೆ ಜಮೀರ್ ಅಹಮ್ಮದ್ ಹೆಗಲೇರಿದೆ ಎನ್ನಲಾಗಿದೆ. ಈ ಪಕ್ಷಗಳಿಗೆ ಐದು ವಿಧಾನಸಭೆ ಕ್ಷೇತ್ರಗಳನ್ನು ಬಿಟ್ಟುಕೊಡುವ ಆಫರ್ ನೀಡಲಾಗಿದೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲೇ ಈ ಪಕ್ಷಗಳು ಗಮನಾರ್ಹ ಪ್ರದರ್ಶನ ನೀಡಿದ್ದವು. ಅಷ್ಟೇ ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿಗಳ ಸುಲಭ ಜಯಕ್ಕೆ ಅಡ್ಡಗಾಲಾಗಿದ್ದವು. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಸಣ್ಣ ಪಕ್ಷಗಳ ಓಲೈಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ