ಜೆಡಿಎಸ್ - ಕಾಂಗ್ರೆಸ್ ನಾಯಕರ ಕುಡುಗೋಲುಗಳು ಮತ್ತು ಮಚ್ಚುಗಳು ಹರಿತ ಕಳೆದುಕೊಂಡು ಮೊಂಡಾಗಿವೆ.
ಹೀಗಂತ ಬಿಜೆಪಿ ನೂತನ ಶಾಸಕ ಟಾಂಗ್ ನೀಡಿದ್ದಾರೆ.
ಮಾಜಿ ಸಚಿವ, ಶಾಸಕ ಸಿ.ಎಸ್.ಪುಟ್ಟರಾಜು ಹೇಳಿಕೆಗೆ ಕೆ.ಆರ್.ಪೇಟೆ ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡ ಸಹಕಾರ ಸಂಘಗಳ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಆಯೋಜಿಸಿದ್ದ ಪೂರ್ವಬಾವಿ ಸಭೆಯಲ್ಲಿ ಟಾಂಗ್ ಕೊಟ್ಟಿದ್ದಾರೆ.
ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಬಿ ಫಾರಂ ಸಿಕ್ಕಿತು ಎಂಬುದು ನನಗೆ ಚೆನ್ನಾಗಿ ಗೊತ್ತು. ಅವರಿಗೆ ಎಲ್ಲಿಂದ ಸಿಕ್ಕಿತು, ಜಿಲ್ಲೆಯ ಜವಾಬ್ದಾರಿ ಹೊತ್ತವನು ಇದೇ ನಾರಾಯಣಗೌಡ ಎಂಬುದು ಬಹಿರಂಗ ಸತ್ಯವಾಗಿದೆ. ನಾನು ಮಾಡಿದ ಸಹಾಯವನ್ನು ಮೊದಲು ನೆನೆದು ನಂತರ ನನ್ನ ಬಿ ಫಾರಂ ಬಗ್ಗೆ ಮಾತನಾಡಲಿ. ಜೆಡಿಎಸ್ ಪಕ್ಷದ ಸಂಘಟನೆಗೆ ನಾನು ಏನು ಮಾಡಿದ್ದೀನಿ ಎಂದು ಪುಟ್ಟರಾಜು ಅವರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದಿದ್ದಾರೆ.
ಜೆಡಿಎಸ್ ಕಾಂಗ್ರೆಸ್ ನಾಯಕರ ಕುಡುಗೋಲುಗಳು ಮತ್ತು ಮಚ್ಚುಗಳು ಹರಿತ ಕಳೆದುಕೊಂಡು ಮೊಂಡಾಗಿವೆ.
ರಾಜ್ಯದ ಕೊಳೆ ಹಾಗೂ ರೈತರ ಜಮೀನಿನಲ್ಲಿ ಬೆಳೆದಿರುವ ಕಳೆಯನ್ನು ಕಿತ್ತು ಭೂಮಿಯನ್ನು ಹಸನು ಮಾಡಲು ಯಡಿಯೂರಪ್ಪ ಅವರ ಹರಿತವಾದ ಕುಡುಗೋಲು ಬೇಕಾಗಿದೆ. ಜಿಲ್ಲೆಯ ನಾಲ್ಕೈದು ತಾಲ್ಲೂಕುಗಳಲ್ಲಿ ಕಮಲ ಅರಳುವುದು ನಿಶ್ಚಿತವಾಗಿದೆ ಎಂದರು.