Publish Date: Tue, 25 Nov 2025 (15:56 IST)
Updated Date: Tue, 25 Nov 2025 (15:58 IST)
ಬೆಂಗಳೂರು: ಕಾಂಗ್ರೆಸ್ ಪಕ್ಷ ದಲಿತರ ಬಗ್ಗೆ ತೋರುವ ಕಾಳಜಿ ಕೇವಲ ಬೂಟಾಟಿಕೆ . ದಲಿತ ನಾಯಕರನ್ನು ಅಧ್ಯಕ್ಷ ಮಾಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡರೆ ಸಾಕೇ ? ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ಯಾವುದೇ ಅಧಿಕಾರ, ಜವಾಬ್ದಾರಿ, ನಿರ್ಣಯ ಕೈಗೊಳ್ಳುವ ಸ್ವಾತಂತ್ರ್ಯ ನೀಡದೆ ಕೀಲು ಗೊಂಬೆ ಮಾಡಿಕೊಂಡಿರುವುದು ಕಾಂಗ್ರೆಸ್ ಢೋಂಗಿತನಕ್ಕೆ ನಿದರ್ಶನ ಎಂದು ಜೆಡಿಎಸ್ ಹೇಳಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದೆ.
ಕಾಂಗ್ರೆಸ್ ಪಕ್ಷ ದಲಿತರ ಬಗ್ಗೆ ತೋರುವ ಕಾಳಜಿ ಕೇವಲ ಬೂಟಾಟಿಕೆ !
ಸಂವಿಧಾನ ಉಳಿಸುತ್ತೇವೆ ಎಂದು ಹಾದಿ ಬೀದಿಯಲ್ಲಿ ನಾಟಕ ಪ್ರದರ್ಶಿಸುವ ರಾಹುಲ್ ಗಾಂಧಿ
ಮತ್ತು ಕಾಂಗ್ರೆಸ್ ನಾಯಕರೇ,
ದಲಿತ ನಾಯಕರನ್ನು ಅಧ್ಯಕ್ಷ ಮಾಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡರೆ ಸಾಕೇ ? ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ಯಾವುದೇ ಅಧಿಕಾರ, ಜವಾಬ್ದಾರಿ, ನಿರ್ಣಯ ಕೈಗೊಳ್ಳುವ ಸ್ವಾತಂತ್ರ್ಯ ನೀಡದೆ ಕೀಲು ಗೊಂಬೆ ಮಾಡಿಕೊಂಡಿರುವುದು ಕಾಂಗ್ರೆಸ್ ಢೋಂಗಿತನಕ್ಕೆ ನಿದರ್ಶನ.
ಕಾಂಗ್ರೆಸ್ ಪಕ್ಷಕ್ಕೆ ದಲಿತರು ಕೇವಲ ವೋಟ್ ಬ್ಯಾಂಕ್ ಅಷ್ಟೇ. ದಲಿತರನ್ನು ಉದ್ಧಾರ ಮಾಡುತ್ತೇವೆ ಎಂದು ಬಿಂಬಿಸಿಕೊಂಡೇ ಕಾಂಗ್ರೆಸ್ ಹಾಗೂ ನಕಲಿ ಗಾಂಧಿ ಕುಟುಂಬ ಅಂದಿನಿಂದ ಇಂದಿನವರೆಗೂ ಅಧಿಕಾರ ಅನುಭವಿಸುತ್ತಿದೆ.. ರಾಹುಲ್ ಗಾಂಧಿ ಹೈಕಮಾಂಡ್ ಆದರೆ, ಎಐಸಿಸಿ ಅಧ್ಯಕ್ಷರ ಕೆಲಸವೇನು ? ಅವರು ತೀರ್ಮಾನ ಕೈಗೊಳ್ಳಲು ಅಸಮರ್ಥರೇ ?