Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಪ್ರೇರಿತ ಪಾದಯಾತ್ರೆ ಅಷ್ಟೇ. ಇದೊಂದು ಕಾಂಗ್ರೆಸ್ನ ಬೀದಿ ನಾಟಕ. ಕಾಂಗ್ರೆಸ್ಗೆ ಬೇರೆ ವಿಷಯಗಳು ಇಲ್ಲ, ಹೀಗಾಗಿ ಪಾದಯಾತ್ರೆ ಗಿಮಿಕ್ ಮಾಡ್ತಿದೆ ಎಂದು ಬೆಂಗಳೂರಿನಲ್ಲಿ ಸಂಸದ ಡಿ.ವಿ. ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.
ಪಾದಯಾತ್ರೆಯಿಂದ ಯಾವ ಸಾಧನೆಯೂ ಆಗಲ್ಲ. ನಮ್ಮ ಸರ್ಕಾರ ಮೇಕೆದಾಟು ವಿಚಾರದಲ್ಲಿ ಅನೇಕ ಕೆಲಸ ಮಾಡಿದೆ. ನಮಗೆ ಕ್ರೆಡಿಟ್ ಕೊಡಬಾರದು ಅಂತ ಕಾಂಗ್ರೆಸ್ ಪಾದಯಾತ್ರೆ ಮಾಡ್ತಿದೆ. ಜನರು ಇದನ್ನು ನೂರಕ್ಕೆ ನೂರರಷ್ಟು ತಿರಸ್ಕಾರ ಮಾಡ್ತಾರೆ.