ವಿಜಯಪುರದ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೆಕನೂರ್ ಹತ್ಯೆ ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ತನಿಖೆ ತೀವ್ರಗೊಂಡಿದೆ.
ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಮಟ್ಟದ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಬಸವನ ಬಾಗೇವಾಡಿ ಡಿಎಸ್ಪಿ ಮಹೇಶ್ವರ ಗೌಡ ಹಾಗೂ ವಿಜಯಪುರ ಡಿಎಸ್ಪಿ ಅಶೋಕ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಓರ್ವ ಡಿವೈಎಸ್ಪಿ, ಓರ್ವ ಸಿಪಿಐ, ಇಬ್ಬರು ಪಿಎಸ್ಐ ಹಾಗು ಪೇದೆಗಳನ್ನೊಳಗೊಂಡ ತಂಡ ತನಿಖೆ ನಡೆಸುತ್ತಿದೆ.
ಎಎಸ್ಪಿ ಬಿ.ಎಸ್ ನೇಮಗೌಡ ಈ ಮಾಹಿತಿ ನೀಡಿದ್ದಾರೆ.
ಸೊಲ್ಲಾಪುರದ ಎಂಐಎಂ ಮುಖಂಡ ತೌಫಿಕ ಶೇಖ್ ಊರ್ಫ್ ಪೈಲ್ವಾನ್ ವಿರುದ್ಧ ದಾಖಲಾಗಿದೆ ಮರ್ಡರ್ ಕೇಸ್.
ಐಪಿಸಿ ಸೆಕ್ಷನ್ 302, 201 ಅಡಿಯಲ್ಲಿ ದಾಖಲಾಗಿದೆ ಪ್ರಕರಣ. ಕೋಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವರ ಹಿಪ್ಪರಗಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ರೇಷ್ಮಾ, ಈಗ ಕಾಂಗ್ರೆಸ್ ನಲ್ಲಿದ್ದರು. ಕರವೇ ರಾಜ್ಯ ಉಪಾಧ್ಯಕ್ಷೆಯಾಗಿದ್ದರು.