Select Your Language

Notifications

webdunia
webdunia
webdunia
webdunia

ಬಿಜೆಪಿ ಹಾಲಿ ಮಾಜಿ ಶಾಸಕರಿಗೆ ಕಾಂಗ್ರೆಸ್‌ ಗಾಳ

ಬಿಜೆಪಿ ಹಾಲಿ ಮಾಜಿ ಶಾಸಕರಿಗೆ ಕಾಂಗ್ರೆಸ್‌ ಗಾಳ
bangalore , ಶನಿವಾರ, 11 ಮಾರ್ಚ್ 2023 (18:01 IST)
ಈ ಬಾರಿಯ ವಿಧಾನ ಸಭೆ ಚುನಾವಣೆಗೆ ಪಕ್ಷಾಂತ ಪರ್ವವೇ ಶುರುವಾಗಿದೆ..ಆಪರೇಷನ್ ಕಮಲಕ್ಕಿಂತ ಆಪರೇಷನ್ ಹಸ್ತವೇ ಬಹಳ ಸದ್ದು ಮಾಡ್ತಿದೆ..ಬಿಜೆಪಿ ಮಾಜಿ ಶಾಸಕರೇ ಈ ಬಾರಿ ಆಪರೇಷನ್ ಹಸ್ತಕ್ಕೆ ಬಲಿಯಾಗಿದ್ದಾರೆ..ಇನ್ನು ನಿನ್ನೆಯೇ ಬಿಜೆಪಿಯ  ಹಾಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಕಮಲಕ್ಕೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಗೆ ಜಂಪ್ ಆಗಿದ್ದಾರೆ.ಆದ್ರೆ ಕಾಂಗ್ರೆಸ್ ಈ ಬಾರಿ ಬಿಜೆಪಿ ಎರಡು ದೊಡ್ಡ ಮೀನುಗಳಿಗೆ ಗಾಳ ಹಾಕಿದೇ.ಈ ಬಾರಿಯ ವಿಧಾನ ಸಭೆ ಚುನಾವಣೆಗೆ ಸದ್ದಿಲ್ಲದೇ ಆಪರೇಷನ್ ಹಸ್ತ ಜೊರಾಗಿಯೇ ನಡೆಯುತ್ತಿದೆ..ಶತಾಯಗತಾಯ ಈ ಬಾರಿ ಅಧಿಕಾರದ ಚುಕ್ಕಾಣೆ ಹಿಡಿಯಲೇ ಬೇಕು ಎಂದು ಕಾಂಗ್ರೆಸ್ ನಿರ್ಧರಿಸಿದೆ..ಅದಕ್ಕಾಗಿಯೇ ಹಾಲಿ ಮಾಜಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿ ಸ್ವಪಕ್ಷಕ್ಕೆ ಸೇರ್ಸಿಕೊಳ್ತಿದ್ದಾರೆ...ಇಗಾಗ್ಲೆ ಬಿಜೆಪಿ ಮಾಜಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿದೆ..ಬಿಜೆಪಿಯ ಮಾಜಿ ನಾಯಕರಿಗೆ ಬಿಟ್ಟು ಹಾಲಿ ನಾಯಕರಿಗೆ ಆಪರೇಷನ್ ಮಾಡೊಕ್ಕೆ ಕಾಂಗ್ರೆಸ್ ರೆಡಿಯಾಗಿದೆ..ನಿನ್ನೆ ಅಷ್ಟೇ ಬಿಜೆಪಿ ಹಾಲಿ ವಿಧಾ‌ನ ಪರಿಷತ್ ಸದಸ್ಯ ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.ಇನ್ನು ಹಾಲಿ ಸಚಿವರಿಗೆ ಆಪರೇಷನ್ ಹಸ್ತ ಮಾಡೊಕ್ಕೆ ಡಿಕೆಶಿ ವೇದಿಕೆ ರೆಡಿಯಾಗಿದೆ.

 ಅಷ್ಟೇ ಆಪರೇಷನ್ ಹಸ್ತಕ್ಕೆ MLC ಪುಟ್ಟಣ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ..ಆದ್ರೆ ಈ ಬಾರಿ ಇಬ್ಬರು ಹಾಲಿ ಸಚಿವರಿಗೆ ಕಾಂಗ್ರೆಸ್ ಗಾಳ ಹಾಕಿದೆ..ಸಚಿವ ವಿ.ಸೋಮಣ್ಣ ಹಾಗೂ ಸಚಿವ ನಾರಯಣಗೌಡ ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಎಂದು ಹೇಳಲಾಗ್ತಿದೆ...ಮಗನಿಗೆ ಬಿಜೆಪಿಯಲ್ಲಿ ಟಿಕೆಟ್ ನೀಡದ ಹಿನ್ನಲೆ ಬಿಜೆಪಿ ಪಕ್ಷದಿಂದ ಹೊರಬರಲು ಸಚಿವ ಸೋಮಣ್ಣ ರೆಡಿಯಾಗಿದ್ದಾರಂತ್ತೆ..ಕಾಂಗ್ರೆಸ್ ಮತ್ತೆ ಘರ ವಾಪಸಿ ಮಾಡಲು ಸೋಮಣ್ಣ ರೆಡಿಯಾಗಿದ್ದಾರೆ..ಸೋಮಣ್ಣ ನಿಂತ ನೀರಲ್ಲ ಹರಿಯುವ ನೀರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ತೊರೆಯುವ ಮಾತಾನಾಡಿದ್ದಾರೆ.

 ಬಿಜೆಪಿಯ ಪ್ರಚಾರ ಸಮಿತಿ ಪಟ್ಟಿ ಬೀಡುಗಡೆ ಆಗಿದೆ..ಆದ್ರೆ ಬಿಜೆಪಿಯ ಪ್ರಚಾರ ಸಮಿತಿಯ ಪಟ್ಟಿಯಲ್ಲಿ ದೂರ ದೂರದಲ್ಲಿ ಕೂಡ ಸಚಿವ ವಿ.ಸೋಮಣ್ಣ ಅವರ ಹೇಸರಿಲ್ಲ..ಬೆಂಗಳೂರಿನ ಎಲ್ಲಾ ಸಚಿವರು ಹೆಸರು ಪ್ರಚಾರ ಸಮೀತಿಯ ಲಿಸ್ಟ್ ನಲ್ಲಿದೆ.. ಆದ್ರೆ ಬಿಜೆಪಿ ಹೈಕಮಾಂಡ್ ಸಚಿವ ವಿ.ಸೋಮಣ್ಣ ಹೆಸರು ಬಿಟ್ಟಿದ್ದು ಕೂಡ ತೀವ್ರ ಕುತುಹಲ ಕೆರಳಿಸಿದೆ.ಇನ್ನು ಆಪರೇಷನ್ ಹಸ್ತದ ಬಗ್ಗೆ ಬಿಜೆಪಿ ಹೈಕಮಾಂಡ್ ಗಮನಕ್ಕೂ ಇದೇನಾ ಅನ್ನೊದು ಡೌಟ್ ಶುರುವಾಗಿದೆ..ಆ ಕಾರಣಕ್ಕಾಗಿಯೇ ಪ್ರಚಾರ ಸಮಿತಿಯಿಂದ ಸಚಿವ ಸೋಮಣ್ಣನಿಗೆ ದೂರ ಇಡಲಾಗಿದೆ ಅಂತ ಹೇಳಲಾಗ್ತಿದೆ

ಸಚಿವ ವಿ.ಸೊಮಣ್ಣನ ಜೋತೆಗೆ ನಾರಾಯಣ್ ಗೌಡ ಕೂಡ ಕಾಂಗ್ರೆಸ್ ಬರ್ತಾರೆ ಅನ್ನೊದು ರಾಜಕೀಯ ವಲಯದಲ್ಲಿ ಸದ್ದು ಮಾಡ್ತಿದೆ..ಈ ಬಾರಿ ಬಿಜೆಪಿ ಇಂದ ಸ್ಪರ್ಧೆ ಮಾಡಿದ್ರೆ ಕೆ.ಆರ್.ಪೇಟೆಯಲ್ಲಿ ಸೋಲು ಗ್ಯಾರಂಟಿ ಅನ್ನೊದು ಸಚಿವ ನಾರಾಯಣ್ ಗೌಡರ ಲೆಕ್ಕಾಚಾರ ಆಗಿದೆ..ಇನ್ನು ಬಿಜೆಪಿಯಲ್ಲಿ ಅಷ್ಟೊಂದು ಪ್ರಭಾವಿ ಖಾತೆ ಕೂಡ ನೀಡಿಲ್ಲ.. ಕಮಲ ಪಡೆಯಲ್ಲಿ ನಾನು ಆಟಕ್ಕೂಂಟು ಲೆಕ್ಕಕಿಲ್ಲ ಎಂಬುದು ಸಚಿವ ನಾರಾಯಣ್ ಗೌಡರಿಗೆ ಅರಿವಾಗಿದೆ .ಅದಕ್ಕಾಗಿ ಈ ಬಾರಿ ಆಪರೇಷನ್ ಹಸ್ತಕ್ಕೆ ಒಳಗಾಗಲು ಇವ್ರು ಕೂಡ ರೆಡಿಯಾಗಿದ್ದಾರೆ. ಇಷ್ಟು ದಿನ ಮಾಜಿ ಶಾಸಕರಿಗೆ ಗಾಳ ಹಾಕ್ತಿದ್ದ ಕಾಂಗ್ರೆಸ್ ಈಗ ಹಾಲಿ ಸಚಿವರಿಗಾಗಿ ತಮ್ಮ ಪಕ್ಷದ ಗೇಟ್ ಓಪನ್ ಮಾಡಿದೆ..ಸೊಮಣ್ಣನ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಆದ್ರೆ ಬಿಜೆಪಿ ಇಂದ ಲಿಂಗಾಯತ ಸಮುದಾಯದ ವೋಟ್ ಗಳು ಸೊಮಣ್ಣನ ಜೋತೆಗೆ ಕೈ ಪಡೆಗೆ ಸೇರುವ ಸಾಧ್ಯತಡ ಇದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಗೆ ಸಿದ್ದರಾಮಯ್ಯ ಪ್ರಶ್ನೆ