ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುತ್ತಾ..? ಡಿಸೆಂಬರ್ ಒಳಗೇ ರಾಜ್ಯದಲ್ಲಿ ಚುನಾವನೆ ನಡೆಯುತ್ತಾ..? ಹೀಗೊಂದು ಚಿಂತನೆಯನ್ನ ಕಾಂಗ್ರೆಸ್ ಹೈಕಮಾಮಡ್ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜ್ಯದಲ್ಲಿ ಶತಾಯಗತಾಯ ಗೆಲುವು ಸಾಧಿಸಲು ಚಿಂತನೆ ನಡೆಸಿರುವ ಕಾಂಗ್ರೆಸ್ ಹೈಕಮಾಂಡ್ ಡಿಸೆಂಬರ್`ಗೂ ಮುನ್ನವೇ ಚುನಾವಣೆ ನಡೆಸಿದರೆ ಹೇಗೆ ಎಂಬ ಚಿಂತನೆ ಆರಂಭಿಸಿದೆ ಎಂದು ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಸಹ ನಡೆಯುತ್ತಿದ್ದು, ಪ್ರತಿಷ್ಠೆ ಕಣವಾಗಿರುವ ಗುಜರಾತ್`ನಲ್ಲಿ ಗೆಲುವು ಸಾಧಿಸಲು ಅಮಿತ್ ಶಾ, ಮೋದಿ ಚಿತ್ತ ನೆಡಲಿದ್ದಾರೆ. ಹೀಗಾಗಿ, ರಾಜ್ಯದ ಮೇಲೆ ಅವರ ಪ್ರಭಾವ ಇರುವುದಿಲ್ಲ ಎಂಬುದು ಕಾಂಗ್ರೆಸ್`ನ ಗೇಮ್ ಪ್ಲಾನ್ ಎನ್ನಲಾಗಿದೆ.
ಆದರೆ, ಸಿಎಂ ಸಿದ್ದರಾಮಯ್ಯನವರ ಪ್ಲಾನ್ ಬೇರೆಯೇ ಇದೆ ಎನ್ನಲಾಗಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಪ್ರಚಾರ ಕೊಟ್ಟು, ಏಪ್ರಿಲ್`ನಲ್ಲಿ ಅವಧಿ ಪೂರ್ಣಗೊಳಿಸಿದ ಬಳಿಕ ಚುನಾವಣೆ ನಡೆಯಲಿದ್ದು, ಅಷ್ಟೊತ್ತಿಗೆ ಮತ್ತೊಂದು ಬಜೆಟ್ ಮಂಡಿಸಿ ಜನರ ಮೆಚ್ಚುಗೆ ಪಡೆಯುವುದು ಸಿದ್ದರಾಮಯ್ಯನವರ ಯೋಜನೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ