Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಳ ಮೀಸಲಾತಿ ಜಾರಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಅಡ್ಡಿ

Central EX Minister A NarayanaSwamy, Karnataka Caste Census, Chief Minister Siddaramaiah

Sampriya

ಬೆಂಗಳೂರು , ಮಂಗಳವಾರ, 29 ಅಕ್ಟೋಬರ್ 2024 (19:10 IST)
Photo Courtesy X
ಬೆಂಗಳೂರು: ಕಾಂತರಾಜು ವರದಿ, ಸದಾಶಿವ ಆಯೋಗದ ವರದಿಯ ಮಾಹಿತಿ ಆಧಾರದಲ್ಲಿ ಒಳ ಮೀಸಲಾತಿ ಕೊಡಿ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜು ವರದಿಯಂತೆ ಜಾತಿ ಗಣತಿ ನಿಮ್ಮಲ್ಲೇ ಇದೆ. ನಮ್ಮ ಕಣ್ಣೊರೆಸಲು, ಈ ಸಮಾಜ ಧಿಕ್ಕರಿಸಲು, ದಿಕ್ಕು ತಪ್ಪಿಸಲು, ಒಳ ಮೀಸಲಾತಿಯ ಮೋಸ ಮಾಡಲು ಯಾವುದೇ ಕಾರಣಕ್ಕೂ ಹೊಸ ಆಯೋಗದ ಅವಶ್ಯಕತೆ ಇಲ್ಲ. ಆಯೋಗ ರಚಿಸಲು ಸರಕಾರದ ಆದೇಶ ಕೊಡಬೇಕಿಲ್ಲ ಎಂದು ಒತ್ತಾಯಿಸಿದರು. ಹರಿಯಾಣದಲ್ಲಿ ಬಿಜೆಪಿ ಸರಕಾರ ಮಾತುಕೊಟ್ಟಂತೆ ಸರಕಾರ ನಡೆದುಕೊಂಡಿದೆ ಎಂದು ಗಮನ ಸೆಳೆದರು.

ಮತ್ತೊಮ್ಮೆ ಅಂಕಿಅಂಶ ಪಡೆಯಲು 8 ವರ್ಷ ಆಗಲಿದೆ. ಆ ಪದವನ್ನು ನಮ್ಮ ಮೇಲೆ ಹೇರಿ ಅದನ್ನು ತೋರಿಸಿ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾಗಿದ್ದು, ಒಳಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ಸಿಗೆ ಇಚ್ಛಾಶಕ್ತಿ ಇಲ್ಲವೆಂಬ ಮಾನಸಿಕತೆ ನಮಗೆ ಬಂದಿದೆ ಎಂದು ತಿಳಿಸಿದರು. ನೀವು ತಮಿಳುನಾಡಿನ ಜನಾರ್ದನ್ ಕಮಿಷನ್ ವರದಿ, ಆಂಧ್ರದ ರಾಮಚಂದ್ರ ಆಯೋಗದ ವರದಿ, ಮಹಾರಾಷ್ಟ್ರದ ವರದಿ ತೆಗೆದರೆ ಯಾವ ಸಮಾಜ ಚಮ್ಮಾರಿಕೆ ವೃತ್ತಿಯ ಮಾದಿಗ ಸಮುದಾಯದ ಉಪ ಜಾತಿಗಳೆಲ್ಲ ಇವೆಯೋ ಅವುಗಳು ಎಲ್ಲ ರಂಗಗಳಲ್ಲಿ ಹಿಂದುಳಿದಿವೆ ಎಂದರು.

ರೇವಂತ್ ರೆಡ್ಡಿಯವರು ಒಳ ಮೀಸಲಾತಿ ಜಾರಿ ಬಗ್ಗೆ ಪ್ರಕಟಿಸಿದ ತಕ್ಷಣ ದೆಹಲಿಯಿಂದ ಫೋನ್ ಬಂತು. ರೇವಂತ್ ರೆಡ್ಡಿಯವರು ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ಹೇಳಿದ್ದು, ಮಾಡಬಾರದೆಂದು ಕಾಂಗ್ರೆಸ್ಸಿನ ದೆಹಲಿ ಹೈಕಮಾಂಡ್ ಫೋನ್ ಬಂದಿದೆ. ಒಳ ಮೀಸಲಾತಿ ವಿಷಯದಲ್ಲಿ ದಕ್ಷಿಣ ಭಾರತದ ಎಲ್ಲ ಕಾಂಗ್ರೆಸ್ ಸರಕಾರಗಳ ಮುಖ್ಯಮಂತ್ರಿಗಳಿಗೆ ಆದೇಶ ಆಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಸಭೆ ಮಾಡಿ ಸೂಚನೆ ಕೊಟ್ಟಿದ್ದಾರೆ; ಇದು ಸಾರ್ವಜನಿಕವಾಗಿ ಚರ್ಚೆ ಆಗಲಿ ಎಂದು ಸವಾಲು ಹಾಕಿದರು.

ನಾವು ಜಾತಿ ಆಧಾರದಲ್ಲಿ ಮೀಸಲಾತಿ ಕೇಳುತ್ತಿಲ್ಲ. ಮಾದಿಗ ಉಪ ಜಾತಿಗಳು ನಿಮ್ಮ ಪಂಚವಾರ್ಷಿಕ ಯೋಜನೆಗಳ ಮಧ್ಯದಲ್ಲಿ 75 ವರ್ಷಗಳ ಬಜೆಟ್ ನಂತರವೂ ಸಹ ಮೀಸಲಾತಿ ತಲುಪಲಾಗುತ್ತಿಲ್ಲ. ಒಂದು ಆಯೋಗ ರಚಿಸಿ 18 ವರ್ಷ ತೆಗೆದುಕೊಂಡರು. ಆಯೋಗದ ಮೇಲೆ ಮತ್ತೊಂದು ಆಯೋಗ ರಚಿಸಿದರೆ ಎಷ್ಟು ದಶಕ ಕಾಯಬೇಕಾದೀತು ಎಂದು ನಮ್ಮ ಪ್ರಶ್ನೆ ಇದೆ ಎಂದು ಕೇಳಿದರು.
ಮೊನ್ನೆ ಪೊಲೀಸ್ ಇನ್‍ಸ್ಪೆಕ್ಟರ್ ಹುದ್ದೆ ಪ್ರಕಟಿಸಿದ್ದಾರೆ. ಅಸ್ಪøಶ್ಯರು ಶೇ 8 ರಷ್ಟಿಲ್ಲ. 81ರ ಪಟ್ಟಿಯಲ್ಲಿ 9 ಜನ ಅಸ್ಪøಶ್ಯರಿಲ್ಲ. ಅಸಿಸ್ಟೆಂಟ್ ಕಮೀಷನರ್ ಹುದ್ದೆಗಳನ್ನು ನೋಡಿದರೆ, ಶೇ 1ರಷ್ಟು ಫಲಿತಾಂಶ ಇಲ್ಲ. 1976ರ ನಂತರ ಮೀಸಲಾತಿಯಲ್ಲಿ 101 ಜಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣತಾ ಅಂಕಿಅಂಶ ನೋಡಿದರೆ, ಬಹುತೇಕ ಅಸ್ಪøಶ್ಯರು ಸರಕಾರಿ ಹುದ್ದೆ ಪಡೆಯಲಾಗುತ್ತಿಲ್ಲ ಎಂದು ವಿವರಿಸಿದರು.

ಸನ್ಮಾನ್ಯ ಮುಖ್ಯಮಂತ್ರಿಗಳೇ, ಉಪ ಮುಖ್ಯಮಂತ್ರಿಗಳೇ ತಮ್ಮ ವ್ಯಾಖ್ಯಾನವನ್ನು ಬದಿಗೊತ್ತಿ. ನಮ್ಮ ಮಾಧುಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಆಗಿತ್ತು. ಅದರಲ್ಲಿ ಕೇವಲ ಸದಾಶಿವ ಆಯೋಗದ ವರದಿ ನೋಡಿ ವರದಿ ಕೊಟ್ಟಿಲ್ಲ; ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚು ಮಾಡಿದ್ದಾಗಿ ವಿವರ ನೀಡಿದರು. 2026ರ ಜನಗಣತಿ ವರೆಗೆ ಕಾಯಿಸುವ ಅಥವಾ ನಮ್ಮನ್ನು ದಿಕ್ಕು ತಪ್ಪಿಸುವ ಆತಂಕ ನಮಗಿದೆ. ಮಾಧುಸ್ವಾಮಿ ವರದಿಯಲ್ಲಿ ಈ ವ್ಯತ್ಯಾಸ ಸರಿಮಾಡಿದ್ದಾರೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಿದ್ದಾರೆ ಎಂದರು.

ಎಲ್ಲ ರಂಗಗಳಲ್ಲಿ ಹಿಂದುಳಿದ ಸಮಾಜಕ್ಕೆ ಮೋಸ ಮಾಡಿದಿರಿ ಎಂದು ಮನವಿ ಮಾಡಿದರು. ಹಿಂದುಳಿದ ಸಮಾಜವನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ. ಡಾ. ಅಂಬೇಡ್ಕರ್ ಅವರು ಇದನ್ನೇ ಹೇಳಿದ್ದಾರೆ. ಸಮಾನತೆಗೆ ಸಂಬಂಧಿಸಿದ ಸಂವಿಧಾನದ ನಿರ್ದೇಶನವನ್ನು ಪಾಲಿಸಿ ಎಂದು ಮುಖ್ಯಮಂತ್ರಿಗಳಲ್ಲಿ ಪ್ರಾರ್ಥಿಸಿದರು.

ಜನಸಂಖ್ಯೆ ಆಧಾರದಲ್ಲಿ ಸಮರ್ಪಕವಾಗಿ ಮೀಸಲಾತಿ ಕೊಟ್ಟಿಲ್ಲ. ಸದಾಶಿವ ಆಯೋಗದ ವರದಿಯಡಿ ಭೋವಿ, ಬಂಜಾರ ಸಮಾಜವನ್ನು ಮೀಸಲಾತಿಯಿಂದ ತೆಗೆಯುತ್ತಾರೆಂದು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿದ್ದರು. ಸದಾಶಿವ ವರದಿ ಸಾರ್ವಜನಿಕ ನೆಲೆಯಲ್ಲಿ ಲಭ್ಯವಿದೆ. ನ್ಯಾ. ಸದಾಶಿವ ಅವರು ಕೇವಲ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಟ್ಟಿಲ್ಲ. ಭೋವಿ, ಲಂಬಾಣಿ ಸಮಾಜವನ್ನು ಮೀಸಲಾತಿಯಿಂದ ತೆಗೆಯುವಂತೆ ನ್ಯಾ. ಸದಾಶಿವ ಆಯೋಗ ವರದಿ ಕೊಟ್ಟಿಲ್ಲ. ಸುಪ್ರೀಂ ಕೋರ್ಟಿಗೆ ಭೋವಿ, ಲಂಬಾಣಿ ಸಮಾಜವನ್ನು ಎಸ್‍ಸಿ ಪಟ್ಟಿಯಿಂದ ತೆಗೆಯಲು ಅರ್ಜಿ ಹಾಕಿದ್ದರೋ ಅದರ ಭಾಗವಾಗಿ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಕೊಟ್ಟಿತ್ತು. ಆಗ ಕೇಂದ್ರವು ಎಸ್‍ಸಿ, ಎಸ್‍ಟಿ ಕಮಿಷನ್‍ಗೆ ಇದರ ಬಗ್ಗೆ ರಾಜ್ಯ ಸರಕಾರದ ಅಭಿಪ್ರಾಯ ಪಡೆಯಲು ತಿಳಿಸಿತ್ತು. 9 ವರ್ಷಗಳ ಕಾಲ ಕಾಂಗ್ರೆಸ್ ಆ ಪತ್ರವನ್ನೇ ನೋಡಿರಲಿಲ್ಲ ಎಂದು ದೂರಿದರು.

ಆ ಪತ್ರಕ್ಕೆ ಸಮರ್ಪಕ ಉತ್ತರವನ್ನು ಬಿಜೆಪಿಯ ಬೊಮ್ಮಾಯಿ ಸರಕಾರವು ಸ್ಪಷ್ಟನೆ ನೀಡಿದ್ದು, ನಾವು ಭೋವಿ, ಲಂಬಾಣಿ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯುವುದಿಲ್ಲ. ಅವರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲೇ ಉಳಿಸಿಕೊಳ್ಳುವುದಾಗಿ ಸ್ಪಷ್ಟ ತೀರ್ಮಾನವನ್ನು ಎಸ್‍ಸಿ, ಎಸ್‍ಟಿ ಕಮಿಷನ್‍ಗೆ ಉತ್ತರಿಸಿದ್ದರು ಎಂದು ವಿವರ ನೀಡಿದರು.

ಒಳಮೀಸಲಾತಿ ವಿಷಯ ರಾಜ್ಯ ಸಚಿವ ಸಂಪುಟದ ಸಭೆ ಮುಂದಿದೆ ಎಂಬುದು ರಾತ್ರಿ 8.50ರವರೆಗೂ ಮಂತ್ರಿಮಂಡಲದ ಸದಸ್ಯರಿಗೆ ಗೊತ್ತಿರಲಿಲ್ಲ. ಕ್ಯಾಬಿನೆಟ್ ಸಭೆ ಪ್ರಾರಂಭವಾದ ಒಂದೂಕಾಲು ಗಂಟೆಯ ನಂತರ ಹೆಚ್ಚುವರಿ ವಿಷಯ ಇದೆ ಎಂದು ಸಂದೇಶ ಬಂದಿತ್ತು. ವಿಷಯ ಚರ್ಚೆ ಆಗುವಾಗ ಅಲ್ಲೇ ಮತ್ತೊಬ್ಬ ಕ್ಯಾಬಿನೆಟ್ ಸದಸ್ಯರು ದಶಾಂಶ ಸರಿಯಿಲ್ಲ; ಇದನ್ನು ನಾವು ಪರಿಹರಿಸಲು ಸಾಧ್ಯವಾಗದು; ಕ್ಯಾಬಿನೆಟ್ ಉಪ ಸಮಿತಿ ಬೇಡ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಬೇಕೆಂದು ತಿಳಿಸಿದ್ದರು ಎಂದರು.

ಕೇವಲ ಜಾತಿ ಆಧಾರದಲ್ಲಿ ಒಳ ಮೀಸಲಾತಿಯನ್ನು ನಾವೆಲ್ಲೂ ಕೇಳಿಲ್ಲ; ಹೈದರಾಬಾದ್ ಕರ್ನಾಟಕವು ಹಿಂದುಳಿದ ಕಾರಣಕ್ಕೆ ಆರ್ಟಿಕಲ್ 371 ಜೆಯನ್ನು ಪ್ರಕಟಿಸಿದ್ದರು. ಈ ಭಾಗದಲ್ಲಿ ಇರತಕ್ಕ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳ ಪಟ್ಟಿಯಲ್ಲಿ 51 ಎಡಗೈ ಸಮುದಾಯದ ಬಂಧುಗಳು, 100ಕ್ಕೆ 80 ಜನಸಂಖ್ಯೆ ಹೆಚ್ಚಾಗಿರುವುದು ನಿಜಾಮರ ಆಡಳಿತವಿದ್ದ ಹೈಕ ಭಾಗದಲ್ಲಿ ಎಂದು ವಿವರ ನೀಡಿದರು. ಆ ಭಾಗದ ಮಾದಿಗರು ಎಲ್ಲ ರಂಗಗÀಳಲ್ಲಿ ದಕ್ಷಿಣ ಕರ್ನಾಟಕದ ಯಾವುದೇ ಸಮಾಜದ ಬಂಧುಗಳ ಜೊತೆ ಸ್ಪರ್ಧಿಸಲು ಆಗುವುದಿಲ್ಲ. ಆರ್ಟಿಕಲ್ 371 ಜೆ ವಿಶೇóಷ ಸ್ಥಾನಮಾನ ಕೊಟ್ಟರೆ ಅಲ್ಲಿನ ಈ ದಲಿತ ಸಮುದಾಯಕ್ಕೆ ಹಿಂದುಳಿದಿರುವಿಕೆ ಆಧಾರದಲ್ಲಿ ಒಳ ಮೀಸಲಾತಿ ಯಾಕೆ ಹೆಚ್ಚು ಕೊಡಬಾರದು ಎಂದು ಪ್ರಶ್ನಿಸಿದರು.

ಜಾತಿ ಆಧಾರದಲ್ಲಿ ಮೀಸಲಾತಿ ಕೇಳಿದ್ದಲ್ಲ. ಈ ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿ ಅನೇಕ ಆಯೋಗಗಳನ್ನು ರಚಿಸಲಾಗಿದೆ. ಸದಾಶಿವ ಆಯೋಗದ ವರದಿಯೂ ನನ್ನ ಕಣ್ಮುಂದೆ ಇದೆ. ಅವರು ಪ್ರತಿ ಜಿಲ್ಲೆ, ಜಿಲ್ಲಾಡಳಿತದ ಜೊತೆ ಚರ್ಚಿಸಿದ್ದಾರೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಮಾಹಿತಿಯೊಂದಿಗೆ ಆ ಸಭೆಗೆ ಬಂದಿದ್ದರು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಪ್ರಕರಣ: ವಿಚಾರಣೆಗೆ ಸಹಕರಿಸದ ಮಾಜಿ ಆಯುಕ್ತ ನಟೇಶ್ ಇಡಿ ವಶಕ್ಕೆ