Select Your Language

Notifications

webdunia
webdunia
webdunia
webdunia

3 ರಾಜ್ಯದಲ್ಲಿ ಕಾಂಗ್ರೆಸ್ ಧೂಳಿ ಪಟವಾಗಿದೆ

3 ರಾಜ್ಯದಲ್ಲಿ ಕಾಂಗ್ರೆಸ್ ಧೂಳಿ ಪಟವಾಗಿದೆ
ನಾಲ್ಕೈದು ಶಾಸಕರು ಬಿಟ್ರೆ ಉಳಿದ ಹಾಲಿ ಶಾಸಕರಿಗೆ ಟಿಕೆಟ್ ಸಿಗುತ್ತೆ. ಪಕ್ಷಕ್ಕೆ ಯಾರಾದ್ರೂ ಬರೋರು ಬರಲಿ.. ಹೋಗೋರು ಹೋಗ್ಲಿ. ಬರೋರಿಗೆ ಸ್ವಾಗತ ಬಿಟ್ಟು ಹೋಗೋರು ಹೋಗ್ಲಿ ಸಂತೋಷ. ಇನ್ನೂ ಅನೇಕ ಜನ ಬಿಜೆಪಿಗೆ ಬರುವರಿದ್ದಾರೆ ಅಂತಾ ಕಲಬುರಗಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ 30 ಕ್ಷೇತ್ರ ಗೆದ್ದೆ ಗೆಲ್ಲೇವೆ. ಕಾಂಗ್ರೆಸ್ ನಾಯಕರು ಟೀಕೆ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ರಮೇಶ್ ಕುಮಾರ್ ಜವಾಬ್ದಾರಿ ನಾಯಕನಾಗಿ ಕಾಂಗ್ರೆಸ್ ಬಗ್ಗೆ ಹೇಳಿದ್ದಾರೆ. ನಾವೆಲ್ಲಾ ಸಾಕಷ್ಟು ಮಾಡಿಕೊಂಡಿದ್ದೇವೆ ಅಂತಾ ಹೇಳಿರೋದಕ್ಕೆ ಸಿದ್ದರಾಮಯ್ಯ ಡಿಕೆಶಿ ಉತ್ತರ ಕೋಡಬೇಕು. ಮೂರು ರಾಜ್ಯದಲ್ಲಿ ಕಾಂಗ್ರೆಸ್ ಧೂಳಿ ಪಟವಾಗಿದೆ. ನಮ್ಮ ರಾಜ್ಯದಲ್ಲಿ 140 ಸೀಟ್ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಜನ ಬರ್ತಿಲ್ಲ ಅನ್ನೋದು ನೀವೆ ನೋಡಿದ್ದೀರಿ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗ್ತಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೈ’ ಹಿಡಿದ ಮೂವರು BJP ಮಾಜಿ ಶಾಸಕರು