Publish Date: Tue, 06 Sep 2022 (15:11 IST)
Updated Date: Tue, 06 Sep 2022 (16:31 IST)
ಬಳ್ಳಾರಿ : ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್. ಬಿಜೆಪಿಯವರಾರು ಸ್ವಾತಂತ್ರ್ಯ ಹೋರಾಟ ಮಾಡಿಲ್ಲ.
ಬಿಜೆಪಿಯಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014 ರಿಂದ ದೇಶ ಸಾಕಷ್ಟು ಹಿನ್ನೆಡೆ ಅನುಭವಿಸಿದೆ. ಬದುಕೋಕು ಬಿಡಲ್ಲ ಸಾಯೋಕು ಬಿಡಲ್ಲ ಸತ್ತ ಮೇಲೂ ಬಿಡೋದಿಲ್ಲ ಅಷ್ಟೊಂದು ಜಿಎಸ್ಟಿ ಹಾಕ್ತಾರೆ.
ಹಿಂದುತ್ವ ಅಜೆಂಡಾ ಭಾವನೆ ಕೆರಳಿಸುತ್ತಾ ಚುನಾವಣೆ ಮಾಡ್ತಾರೆ. 40% ಭ್ರಷ್ಟಾಚಾರ ಮಾಡಿರೋ ಸರ್ಕಾರ ಕಾಂಟ್ರಾಕ್ಟರ್ ಗಳೇ ಈ ಬಗ್ಗೆ ದೂರನ್ನು ನೀಡಿದ್ದಾರೆ. ಐಟಿ, ಸಿಬಿಐ, ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆ 40% ದಿಂದ 80% ಕ್ಕೆ ಹೋದರೂ ಅಚ್ಚರಿಯಿಲ್ಲ. ಹಿಜಬ್, ಹಲಾಲ್, ಪಠ್ಯ ಪುಸ್ತಕ ಗೊಂದಲ. ಇದೇ ಈ ಸರ್ಕಾರದ ಸಾಧನೆ.
Ramya kosira
Publish Date: Tue, 06 Sep 2022 (15:11 IST)
Updated Date: Tue, 06 Sep 2022 (16:31 IST)