Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹಾಸನದಲ್ಲಿ ಬಿಜೆಪಿ ಮುಖಂಡ ಬಿಜೆಪಿ ಕಾರ್ಯಕರ್ತನನ ಜೊತೆ ಹೊಡೆದಾಡುತ್ತಿರುವ ವಿಡಿಯೋ ಟ್ಯಾಗ್ ಮಾಡಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ಬಿಜೆಪಿV/s ಬಿಜೆಪಿ ಕಚ್ಚಾಟವು ಅಕ್ಷರಶಃ ಬೀದಿ ಕಾಳಗವಾಗಿ ಪರಿಣಮಿಸಿದೆ.ಕಾರ್ಯಕರ್ತನನ್ನೇ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಅದೇನೋ ಚಪ್ಪಲಿ, ಸಭೆ ಎನ್ನುತ್ತಿದ್ದ ನಳೀನ್ ಕುಮಾರ್ ಕಟೀಲ್ ಅವರೇ, ನಿಮ್ಮವರು ಹಾದಿ ಬೀದಿಯಲ್ಲಿ ಹೊಡೆದಾಡಿಕೊಳ್ಳುತ್ತಿರುವುದೋ ಅಥವಾ ಮುದ್ದಾಡಿಕೊಳ್ಳುತ್ತಿರುವುದೋ ಎಂದು ನಳೀನ್ ಕುಮಾರ್ ಕಟೀಲ್ ಗೆ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.