Publish Date: Wed, 08 Feb 2023 (08:20 IST)
Updated Date: Wed, 08 Feb 2023 (09:22 IST)
ಬೆಂಗಳೂರು : ಮದುವೆ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ ಅಂತಾರೆ. ಮದುವೆ ಜನುಮ ಜನುಮಗಳ ಅನುಬಂಧ ಅಂತಾರೆ. ಆದರೆ ಇತ್ತೀಚಿನ ದಾಂಪತ್ಯ ಜೀವನ ಸುದೀರ್ಗ ಬಂಧನವನ್ನೇ ಕಳೆದುಕೊಂಡು ಬಿಡುತ್ತವೆ.
ಇಂತಹ ದಿನಗಳಲ್ಲಿ ಮದುವೆಯಲ್ಲೂ ಹೊಸ ಟ್ರೆಂಡ್ ಶುರುವಾಗಿದೆ. ಇಂದಿನ ಜನರೇಶನ್ ಮದುವೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಅರ್ಥಾಥ್ ಬೆಂಗಳೂರಿನಲ್ಲಿ ವಧು-ವರರ ನಯಾ ಟ್ರೆಂಡ್ ಶುರುವಾಗಿದೆ.
ಹೌದು, ಸಪ್ತಪದಿ ತುಳಿಯೋಕೆ ಮುನ್ನಾ ಕಾಂಟ್ರಕ್ಟ್. ಮಾಂಗಲ್ಯಧಾರಣೆಗೂ ಮುನ್ನವೇ ಆಗ್ರಿಮೆಂಟ್ ಅಂದರೆ ಕರಾರು ಒಪ್ಪಂದ ಶುರುವಾಗಿದೆ. ಮದುವೆಯಾಗಲು ನಿರ್ಧರಿಸುವ ವಧು-ವರರ ಈ ಲೇಟೆಸ್ಟ್ ಟ್ರೆಂಡ್ ಈಗ ವಕೀಲರನ್ನೇ ನಿದ್ದೆಗೆಡಿಸಿದೆ.