ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಡ್ಯಾಂನಿಂದ ನದಿಗೆ 1,74,797 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಕಂಪ್ಲಿ ಸೇತುವೆ ಜಲಾವೃತವಾಗಿದೆ. ಗಂಟೆಯಿಂದ ಗಂಟೆಗೆ ನದಿ ಪಾತ್ರಕ್ಕೆ ಹೊರಹರಿವು ಹೆಚ್ಚಳವಾಗುತ್ತಿದ್ದು, ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. 25 ಗೇಟಗಳ ಮೂಲಕ ನದಿಗೆ ನೀರು ಬಿಡಲಾಗಿದೆ. 2 ಲಕ್ಷ ಕ್ಯೂಸೆಕ್ವರೆಗೂ ನದಿಗೆ ನೀರು ಹರಿಸುವ ಕುರಿತು ಟಿಬಿ ಬೋರ್ಡ್ ಎಚ್ಚರಿಕೆ ನೀಡಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಟಿಬಿ ಬೋರ್ಡ್ ಎಚ್ಚರಿಕೆ ನೀಡಿದೆ. ಇನ್ನು ಕೃಷ್ಣ ನದಿ ಪಾತ್ರದಲ್ಲಿರುವ ಜಲಾಶಯಗಳು ಭರ್ತಿಯಾಗಿದ್ದು, ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.