Publish Date: Mon, 18 May 2020 (15:21 IST)
Updated Date: Mon, 18 May 2020 (15:23 IST)
ಲಾಕ್ ಡೌನ್ 4 ನ ನೂತನ ನಿಯಮಾವಳಿಗಳನ್ನು ರಾಜ್ಯ ಸರಕಾರ ಸೂಚಿಸಿದ್ದು, ಪ್ರತಿ ಭಾನುವಾರ ಸಂಪೂರ್ಣವಾಗಿ ಲಾಕ್ ಡೌನ್ ಇರಲಿದೆ.
ಭಾನುವಾರದಂದು ಸಂಪೂರ್ಣವಾಗಿ ಲಾಕ್ ಡೌನ್ ಮಾಡಬೇಕೆಂದು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ.
ಸಂಡೇ ಯಾವುದೇ ಅಂಗಡಿಗಳನ್ನು ಓಪನ್ ಮಾಡುವಂತಿಲ್ಲ. ಬಸ್, ಆಟೋ, ಕ್ಯಾಬ್ ಗಳು ಓಡಾಡುವಂತಿಲ್ಲ.
ಮದ್ಯದ ಅಂಗಡಿಗಳಿಗೆ ಬೀಗ ಹಾಕಲೇಬೇಕು. ಹೀಗಾಗಿ ಮದ್ಯ ಮಾರಾಟಕ್ಕೆ ಭಾನುವಾರ ನಿಷೇಧವಿದೆ. ಮನೆಯಿಂದ ಯಾರೂ ಹೊರಬಾರದು ಎಂದು ಸೂಚಿಸಲಾಗಿದೆ.
ಸಂಡೇ ರಾಜ್ಯದಲ್ಲಿ ಒಂದು ರೀತಿಯ ಅಘೋಷಿತ ಬಂದ್ ವಾತಾವರಣದಂತೆ ಇನ್ಮುಂದೆ ಕಂಡು ಬರಲಿದೆ.