ಬೆಂಗಳೂರು : ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಅಪರೇಷನ್ ಕಮಲದ ಆಡಿಯೋದ ಸಂಪೂರ್ಣ ಮಾಹಿತಿ ಇದೀಗ ಬಹಿರಂಗವಾಗಿದೆ.
ಬಿಎಸ್ ವೈ ಜೊತೆ ಮಾತನಾಡುವ ಮುನ್ನ ಶರಣಗೌಡನ ಜೊತೆ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಡೀಲ್ ಬಗ್ಗೆ ಚರ್ಚೆ ಮಾಡಿದ್ದಾರೆ. ಅತೃಪ್ತ ಶಾಸಕರನ್ನು ಒಗ್ಗೂಡಿಸುವುದು ಹೇಗೆ? ಶಾಸಕರ ರಾಜೀನಾಮೆ ಕೊಡಿಸೋದು ಹೇಗೆ? ಎಂದು ಶಿವನಗೌಡ ನಾಯಕ್ ಶರಣಗೌಡ ಮುಂದೆ ಆಪರೇಷನ್ ಪ್ಲಾನ್ ಬಿಚ್ಚಿಟ್ಟಿದ್ದಾರೆ. ‘ಸದ್ಯ 10 ಆಗಿದೆ, ನಾಳೆ ಮತ್ತೆ ಮೂವರು ಬಂದು ಸೇರ್ತಾರೆ. 15 ಆದ ಕೂಡಲೇ ರಾಜೀನಾಮೆ ಕೊಡಿಸೋ ಕೆಲಸ’ ಎಂದು ಅತೃಪ್ತರ ಸಂಖ್ಯೆ ಬಗ್ಗೆ ಶರಣಗೌಡಗೆ ಶಿವನಗೌಡ ನಾಯಕ್ ವಿವರಣೆ ನೀಡಿದ್ದಾರೆ.
ಹಾಗೇ ರಮೇಶ್ ಕುಮಾರ್ ಕಾಂಗ್ರೆಸ್ ಫೇವರ್ ಅಲ್ವಾ ಎಂದ ಶರಣಗೌಡ ಪ್ರಶ್ನಿಸಿದ್ದಕ್ಕೆ, ಇದನ್ನ ಅಮಿತ್ ಶಾ, ಪ್ರಧಾನಿ ಮೋದಿ ನೋಡಿಕೊಳ್ತಾರೆ. ದೊಡ್ಡ ಲೆವೆಲ್ ನಲ್ಲಿ ಗವರ್ನರ್ ದು ಎಲ್ಲಾ ಆಗಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಜಡ್ಜಸ್ ಗೆ ಎಲ್ಲವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಏನೇನು ಮಾಡಬೇಕು ಅನ್ನೋ ಮಟ್ಟಿಗೆ ಎಲ್ಲಾ ರೆಡಿಯಾಗಿದೆ ಎಂದು ಶಿವನಗೌಡ ನಾಯಕ್ ಶರಣಗೌಡ ಮುಂದೆ ಆಪರೇಷನ್ ಪ್ಲಾನ್ ಬಿಚ್ಚಿಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.