Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ವಾಹಸ ಸವಾರರೊಬ್ಬರ ವಾಹನ ತಡೆದು ದಂಡ ಹಾಕಲು ಮುಂದಾಗಿದ್ದಕ್ಕೆ ಇನ್ಸ್ಪೆಕ್ಟರ್ ಒಬ್ಬರು ASIಗೆ ಆವಾಜ್ ಹಾಕಿದ ಆಡಿಯೋ ವೈರಲ್ ಆಗಿತ್ತು. 41 ಸಾವಿರ ದಂಡವನ್ನು ಉಳಿಸಿಕೊಂಡಿದ್ದ ವಾಹನ ಸವಾರರನ್ನು ಟ್ರಾಫಿಕ್ ASI ವೆಂಕಟೇಶ್ ತಡೆದು ದಂಡ ಹಾಕಲು ಮುಂದಾಗಿದ್ರು. ಆಗ ಏರ್ಪೋರ್ಟ್ ಇನ್ಸ್ಪೆಕ್ಟರ್ ಮುತ್ತುರಾಜ್ ASIಗೆ ಫೋನ್ ಮಾಡಿ ಆವಾಜ್ ಹಾಕಿದ್ರು. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ASI ವಿರುದ್ಧ ಕ್ರಮ ಜರುಗಿಸುವಂತೆ ಇನ್ಸ್ಪೆಕ್ಟರ್ ಮುತ್ತುರಾಜ್ ದೇವನಹಳ್ಳಿ ACPಗೆ ದೂರು ನೀಡಿದ್ದಾರೆ. ವೆಂಕಟೇಶ್ ಉದ್ಧಟತನದಿಂದ ಮಾತನಾಡಿ ಆಡಿಯೋ ರೆಕಾರ್ಡ್ ಮಾಡಿ ಮಾಧ್ಯಮಗಳಿಗೆ ಆಡಿಯೋ ವೈರಲ್ ಮಾಡಿದ್ದಾರೆ. ಹೀಗಾಗಿ ASI ವೆಂಕಟೇಶ್ ವಿರುದ್ಧ ಕ್ರಮ ಜರುಗಿಸುವಂತೆ ದೂರು ದಾಖಲಿಸಲಾಗಿದೆ.