Publish Date: Thu, 25 Oct 2018 (12:40 IST)
Updated Date: Thu, 25 Oct 2018 (12:43 IST)
ಮೈಸೂರು: ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ನಾಪತ್ತೆಯಾಗಿದ್ದಾರೆಂದು ಮೈಸೂರಿನಲ್ಲಿ ದೂರೊಂದು ದಾಖಲಾಗಿದೆ.
ವಿಧಾನಸೌಧದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಗೈರಾಗಿ ನಾಪತ್ತೆಯಾಗಿರುವ ಕಾರಣಕ್ಕೆ ಇವರನ್ನು ಹುಡುಕಿಕೊಡಿ ಎಂದು ಪಡುವಾರಹಳ್ಳಿಯ ವಕೀಲ ರಾಮಕೃಷ್ಣ ಎಂಬವರು ಮೈಸೂರಿನ ಲಕ್ಷ್ಮೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ಥಳೀಯ ಠಾಣೆಯ ಮೂಲಕ ಡಿಜಿಪಿಗೆ ಸಿಎಂ ಮತ್ತು ಡಿಸಿಎಂ ವಿರುದ್ಧವಾಗಿ ವಕೀಲ ರಾಮಕೃಷ್ಣ ದೂರು ನೀಡಿದ್ದಾರೆ. ವಾಲ್ಮೀಕಿ ಜಯಂತಿಗೆ ಗೈರು ಹಾಜರಾಗುವ ಮೂಲಕ ಇವರಿಬ್ಬರೂ ಮಹರ್ಷಿ ವಾಲ್ಮೀಕಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.