8ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಬಾಲಾ ಮಣಿಕಂದನ್ ಶೈಕ್ಷಣಿಕ ಸಾಲಿನ ರಜೆಗೆಂದು ಮನೆಗೆ ಹಿಂದುರುಗಿದಾಗ ತೂಕಡಿಸಲು ಆರಂಭಿಸಿದನು.
ಶಾಲೆಯಲ್ಲಿ ಏನಾದರೂ ಸೇವಿಸಿದ್ದೀಯಾ ಎಂದು ತಾಯಿ ಕೇಳಿದಾಗ, ವಾಚ್‍ಮ್ಯಾನ್ ತನಗೆ ಜ್ಯೂಸ್ ನೀಡಿದ್ದು, ಅದನ್ನು ಕುಡಿದ ನಂತರ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದಾನೆ.
ಇನ್ನು ವಾಚ್‍ಮ್ಯಾನ್ ಏಕೆ ಜ್ಯೂಸ್ ನೀಡಿರಬಹುದು ಎಂದು ಪೋಷಕರು ಮತ್ತು ಆತನ ಸಂಬಂಧಿಕರು ವಿಚಾರಿಸಿದಾಗ ಮಹಿಳೆಯೊಬ್ಬರು ತನ್ನ ಬಳಿಗೆ ಬಂದು ಎರಡು ಜ್ಯೂಸ್ ಬಾಟಲಿಗಳನ್ನು ನೀಡಿ, ಬಾಲಾ ಅವರ ಮನೆಯವರು ಕಳುಹಿಸಿದ್ದಾರೆ ಆತನಿಗೆ ನೀಡುವಂತೆ ಹೇಳಿರುವುದಾಗಿ ವಾಚ್ ಮ್ಯಾನ್ ಹೇಳಿದ್ದಾನೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬರು ವಾಚ್‍ಮ್ಯಾನ್‍ಗೆ ಜ್ಯೂಸ್ ನೀಡುತ್ತಿರುವುದು ಕಂಡುಬಂದಿದೆ. ನಂತರ ಆಕೆಯನ್ನು ಬಾಲನ ಸಹಪಾಠಿ ಅರುಲ್ ಮೇರಿಯ ತಾಯಿ ಸಗಾಯರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಗಿದೆ.
ಬಾಲಕ ತನ್ನ ಮಗನಿಗೆ ಓದುವುದರಲ್ಲಿ ಕಾಂಪಿಟೇಷನ್ ನೀಡುತ್ತಿದ್ದ ಕಾರಣಕ್ಕೆ ಹೀಗೆ ಮಾಡಿದ್ದಾಳೆ ಎಂದು ತಿಳಿದು ಬಂದಿದ್ದು, ಚಿಕಿತ್ಸೆ ಫಲಾಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.