ವಿಶಿಷ್ಠ ಶೈಲಿಯ ಹಾಡುಗಾರಿಕೆಯ ಮೂಲಕ ಕರುನಾಡಿನಲ್ಲಿ ಹೈಪ್ ಸೃಷಿಸಿದ ಭೂಪ ಈತ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ರಾಜಕೀಯ ಹೇಳಿಕೆಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.
ಚಿಕ್ಕಮಗಳೂರಿಗೆ ಹೋಗಿ ಕಾಫಿನಾಡು ಚಂದು ಭೇಟಿಯಾಗಿ ಒಂದು ವಿಡಿಯೋ ಮಾಡಿಸಿ ಗೆಳೆಯನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡೋಣ ಅಂತಿದಾರೆ ಎಲ್ಲರೂ. ಈ ನಡುವೆ ಕಾರ್ಯಕ್ರಮಗಳಿಗೂ ಚಂದುವನ್ನು ಆಹ್ವಾನಿಸಲಾಗುತ್ತಿದೆ. ಸದ್ಯ ಚಂದು ತನಗೆ ರಾಜಕೀಯಕ್ಕೆ ಸೇರಿ ಎಂದು ಬಿಟ್ಟಿ ಸಲಹೆ ನೀಡಿದ್ದವರಿಗೆ ತನ್ನದೇ ಮಾತಿನ ದಾಟಿಯಲ್ಲಿ ಉತ್ತರಿಸಿದ್ದಾನೆ
ʼನನಗೆ ರಾಜಕೀಯಕ್ಕೆ ನಿಂತುಕೊಳ್ಳಲು ಕೆಲವು ಜನರು ಹೇಳಿದ್ರು, ಆದ್ರೆ ನನಗೆ ಅದ್ರಲ್ಲಿ ಇಂಟರೆಸ್ಟ್ ಇಲ್ಲ. ಯಾಕೆಂದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇದಾವೆ. ಓಹೋ ಚಂದು ಕಾಂಗ್ರೆಸ್ಗೆ ನಿಂತುಕೊಂಡ, ಬಿಜೆಪಿಗೆ ನಿಂತುಕೊಂಡ ಅಂತ ಜನರು ಹೇಳೋದು ಬೇಡ. ನಾನು ರಾಜಕೀಯ ಬಗ್ಗೆ ಮಾತನಾಡೋಕೆ ರಾಜಕಾರಣಿನೂ ಅಲ್ಲ ದೇವಸ್ಥಾನದ ಬಗ್ಗೆ ಪೂಜಾರಿಯೂ ಅಲ್ಲ, ನಾನು ಶಿವಣ್ಣ ಮತ್ತು ಪುನೀತಣ್ಣ ಅವರ ಅಭಿಮಾನಿʼ ಎಂದು ಹೇಳಿದ್ದಾನೆ.