Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಪಾಹ್ ವೈರಸ್ ಜತೆಗೇ ಕರಾವಳಿ ಪ್ರದೇಶಕ್ಕೆ ಮತ್ತೊಂದು ಅಪಾಯ!

ನಿಪಾಹ್ ವೈರಸ್ ಜತೆಗೇ ಕರಾವಳಿ ಪ್ರದೇಶಕ್ಕೆ ಮತ್ತೊಂದು ಅಪಾಯ!
ಮಂಗಳೂರು , ಗುರುವಾರ, 24 ಮೇ 2018 (09:46 IST)
ಮಂಗಳೂರು: ಕೇರಳದಿಂದ ಮಂಗಳೂರು ಭಾಗದವರೆಗೆ ನಿಪಾಹ್ ವೈರಸ್ ಜ್ವರವೆಂಬ ಮಾರಣಾಂತಿಕ ಖಾಯಿಲೆಯ ಬಗ್ಗೆ ಜನ ಭಯಭೀತರಾಗಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ಪ್ರಾಕೃತಿಕ ವಿಕೋಪದ ಮುನ್ಸೂಚನೆ ಸಿಕ್ಕಿದೆ.
 

ಅರಬ್ಬಿ ಸಮುದ್ರದಲ್ಲಿ ಮೆಕುನು ಚಂಡಮಾರುತ ಏಳಲಿದ್ದು, ಇದರಿಂದಾಗಿ ಮೂರು ದಿನಗಳ ಕಾಲ ಸಮುದ್ರ ಕರಾವಳಿ ಪ್ರದೇಶದ ಜನರಿಗೆ ಎಚ್ಚರವಾಗಿರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಮೇ 26 ರವರೆಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದಾದ್ಯಂತ ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸತ್ತ ಅಶ್ವಮೇಧ ಕುದುರೆಯನ್ನು ಪ್ರಧಾನಿ ಬಳಿಗೆ ಅಮಿತ್ ಶಾ ಕೊಂಡೊಯ್ಯಬೇಕಷ್ಟೆ: ಸಿಎಂ ಕುಮಾರಸ್ವಾಮಿ ಟಾಂಗ್