Select Your Language

Notifications

webdunia
webdunia
webdunia
webdunia

ಮಲ್ಲೇಶ್ವರಂ ಕಾಲೇಜಿಗೆ ಸಿಎಂ ಭೇಟಿ; ಖುದ್ದು ಪರಿಶೀಲನೆ

ಕಾಲೇಜುಗಳು ಆರಂಭ
ಬೆಂಗಳೂರು: ಕೋವಿಡ್ 3ನೇ ಅಲೆ ಭೀತಿ ನಡುವೆಯೇ ಇಂದಿನಿಂದ 9-12ನೇ ತರಗತಿವರೆಗೆ ಶಾಲಾ-ಕಾಲೇಜುಗಳು ಆರಂಭಗೊಂಡಿದ್ದು, ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ನ 18ನೇ ಕ್ರಾಸ್ ನಲ್ಲಿರುವ ಕಾಲೇಜಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಕಾಲೇಜು ಆವರಣದಲ್ಲಿ ಸಂಪಿಗೆ ಗಿಡನೆಟ್ಟು ನೀರೆರೆದರು. ಈ ವೇಳೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಮೊದಲಾದವರು ಸಿಎಂಗೆ ಸಾಥ್ ನೀಡಿದರು.
ಕೊರೊನಾ ಮುಂಜಾಗೃತಾ ಕ್ರಮವಾಗಿ ಕಾಲೇಜಿನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು, ಥರ್ಮಲ್ ಸ್ಕ್ರೀನಿಂಗ್, ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಅಂತರ ಸೇರಿದಂತೆ ಖುದ್ದು ಪರಿಶೀಲನೆ ನಡೆಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಬಲೂನಿಗೆ ಗಾಳಿ ತುಂಬಿಸುವ ಗ್ಯಾಸ್ ಸಿಲಿಂಡರ್ ಸ್ಫೋಟ