Publish Date: Sat, 30 Jan 2021 (13:07 IST)
Updated Date: Sat, 30 Jan 2021 (13:08 IST)
ಬೆಳಗಾವಿ : ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಮರಾಠಿಗರು ತಿರುಗೇಟು ನೀಡಿದ್ದಾರೆ.
ಗಡಿಭಾಗದ ಮರಾಠಿಗರು ಕರ್ನಾಟಕದಲ್ಲಿ ಇದ್ದಿದ್ದು ದೇವರ ಆಶೀರ್ವಾದವಾಗಿದೆ. ಮೊದಲು ಮಹಾರಾಷ್ಟ್ರದ ಮೂಲಸೌಕರ್ಯ ಸಮಸ್ಯೆಗಳನ್ನು ಬಗೆಹರಿಸಿ. ಗಡಿ ಸಮಸ್ಯೆಗಿಂತ ಹೆಚ್ಚಿನ ಸಮಸ್ಯೆಗಳು ಮಹಾರಾಷ್ಟ್ರದಲ್ಲಿದೆ. ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಿ ಮೂಲಸೌಕರ್ಯ ಕಲ್ಪಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾರಿದ್ದಾರೆ.