ಬೆಂಗಳೂರು: ಇಂದು ನಮ್ಮ ಸಂವಿಧಾನ ಅಂಗೀಕಾರವಾದ ದಿನ. ಹಾಗಾಗಿ ಸಂವಿಧಾನ ಅಂಗೀಕಾರ ದಿನವಾಗಿ ಆಚರಿಸಲಾಗುತ್ತಿದೆ. ಆದರೆ ಈ ಕಾರ್ಯಕ್ರಮದ ಜಾಹೀರಾತಿನಲ್ಲಿ ಅಂಬೇಡ್ಕರ್ ಭಾವಚಿತ್ರವೇ ಇಲ್ಲದಿರುವುದಕ್ಕೆ ಬಿಜೆಪಿ ಟೀಕಿಸಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಬಿಜೆಪಿಯವರ ಎಲ್ಲಾ ಟೀಕೆಗಳಿಗೆ ಉತ್ತರಿಸಲು ಆಗಲ್ಲ. ಅವರಿಗೆ ಬೇರೆ ಕೆಲಸವಿಲ್ಲ. ಅದಕ್ಕೆ ಟೀಕಿಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಉಡುಪಿಯ ಧರ್ಮಸಂಸದ್ ನಲ್ಲಿ ಸಂವಿಧಾನ ಪುನಾರಚನೆ ಬಗ್ಗೆ ಪ್ರಸ್ತಾಪಿಸಿದ್ದ ಪೇಜಾವರ ಶ್ರೀಗಳ ವಿರುದ್ಧ ಸಿಎಂ ಟಾಂಗ್ ಕೊಟ್ಟರು. ಕೆಲವರು ಜಾತಿ ಜಾತಿಗಳ ನಡುವೆ ಧ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅಂತಹವರಿಂದಲೇ ಇಂತಹ ಮಾತುಗಳು ಬರುವುದು ಎಂದರಲ್ಲದೆ, ಸಂವಿಧಾನದ ಮೊದಲ ಪೀಠಿಕೆಯೇ ಭಾರತ ರತ್ನ ಅಂಬೇಡ್ಕರ್ ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ