Publish Date: Sun, 21 Jan 2018 (13:19 IST)
Updated Date: Sun, 21 Jan 2018 (13:22 IST)
ಬೆಂಗಳೂರು: ಮಾಜಿ ಸಿಎಂಗಳಾದ ಎಚ್ ಡಿ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪನವರಿಗೆ ಹಾಲಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಬಾಗೇಪಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಪದೇ ಪದೇ ನಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಿರುವ ಈ ಇಬ್ಬರು ಮಾಜಿ ಸಿಎಂಗಳ ಪ್ರಕಾರ ಬೇರೆ ಯಾರೂ ಮಣ್ಣಿನ ಮಕ್ಕಳೇ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.
‘ಈ ಇಬ್ಬರು ನಾವು ಮಣ್ಣಿನ ಮಕ್ಕಳು ಎಂದು ಕೊಚ್ಚಿಕೊಳ್ಳುತ್ತಿರುತ್ತಾರೆ. ಹಾಗಿದ್ದರೆ ನಾವೆಲ್ಲಾ ಮಣ್ಣಿನ ಮಕ್ಕಳಲ್ಲವೇ? ನಿಜವಾದ ಮಣ್ಣಿನ ಮಕ್ಕಳು ನಾವು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ