Publish Date: Wed, 03 Jan 2018 (08:44 IST)
Updated Date: Wed, 03 Jan 2018 (08:50 IST)
ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಖಾದಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಮಳಿಗೆಯೊಂದರಲ್ಲಿ 30 ಪಂಚೆ ಖರೀದಿಸಿದ್ದಾರೆ.
ಖಾದಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ಕೈಗಾರಿಕೆ ಸಚಿವೆ ಗೀತಾ ಮಹದೇವ ಪ್ರಸಾದ್ ಮಳಿಗೆಗೆ ಭೇಟಿ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಖಾದಿ ವಸ್ತ್ರಗಳ ಮಳಿಗೆಯೊಂದರಿಂದ 30 ಪಂಚೆಗಳನ್ನು ಖರೀದಿ ಮಾಡಿದ್ದಾರೆ.
ಸುಮಾರು 17,500 ರೂ.ಗಳ ಪಂಚೆ ಖರೀದಿ ಮಾಡಿದ ಸಿಎಂ ಬಿಲ್ ಮನೆಗೆ ಕಳುಹಿಸಿಕೊಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಅಂತೂ ಸಿಎಂ ಭರ್ಜರಿ ವ್ಯಾಪಾರ ಮಾಡಿದ್ದು ಮಳಿಗೆಯ ಮಾಲಿಕರಿಗೂ ಭಾರೀ ಖುಷಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ