Publish Date: Thu, 22 Mar 2018 (11:59 IST)
Updated Date: Thu, 22 Mar 2018 (12:01 IST)
ಬೆಂಗಳೂರು: ಮಂಜೇಗೌಡರ ಜತೆ ಚ್ ಡಿ ರೇವಣ್ಣ ಬಗ್ಗೆ ಸಿಎಂ ಸಿದ್ದರಾಮಯ್ಯ ಫೋನ್ ಸಂಭಾಷಣೆ ನಡೆಸಿರುವ ಕುರಿತ ವಿವಾದದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನ ಫೋನ್ ಸಂಭಾಷಣೆಯನ್ನು ಯಾರೂ ಬೇಕಾದರೂ ಕದ್ದಾಲಿಸಬಹುದು. ಅದರಲ್ಲಿ ಮುಚ್ಚು ಮರೆ ಏನೂ ಇಲ್ಲ. ನಾನು ಕದ್ದು ಮುಚ್ಚಿ ಮಾತನಾಡುವವನಲ್ಲ. ಮಂಜೇಗೌಡರ ಜತೆ ಮಾತನಾಡಿದ್ದು ನಿಜ. ಏನಿವಾಗ?’ ಎಂದು ಸಿಎಂ ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುವಾಗ ಹೇಳಿಕೊಂಡಿದ್ದಾರೆ.
ನನ್ನ ಜೀವನ, ಮಾತು ಎಲ್ಲವೂ ತೆರೆದ ಪುಸ್ತಕ ಇದ್ದಂತೆ. ನನಗೆ ಯಾರ ಭಯವಿಲ್ಲ. ಫೋನ್ ಟ್ಯಾಪ್ ಆದರೂ ಕೇರ್ ಮಾಡಲ್ಲ ಎಂದು ಸಿಎಂ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ