ಬೆಳಗಾವಿ: ಖಾಸಗಿ ವೈದ್ಯರ ವಿಧೇಯಕ ಮಂಡನೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಅತ್ತ ಸಚಿವ ರಮೇಶ್ ಕುಮಾರ್ ಬೆದರಿಕೆ, ಇತ್ತಖಾಸಗಿ ವೈದ್ಯರ ಬೆದರಿಕೆ.. ಅಂತೂ ಇಬ್ಬರನ್ನೂ ಸಮಾಧಾನಪಡಿಸುವ ಸ್ಥಿತಿ ಸಿಎಂರದ್ದಾಗಿದೆ.
ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರಬೇಕಾದರೆ, ಹೊರಗೆ ನೂರಾರು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಸಗಿ ವೈದ್ಯರ ಮೇಲೆ ಅಂಕುಶ ಹೇರುವ ವಿದೇಯಕ ಮಂಡನೆಯಾಗಬಾರದು ಎಂದು ಒತ್ತಾಯಿಸುತ್ತಿದ್ದಾರೆ.
ಆದರೆ ಇತ್ತ ಆರೋಗ್ಯ ಸಚಿವ ರಮೇಶ್ ಕುಮಾರ್ ಸಾಕಷ್ಟು ಚಿಂತನೆ ನಡೆಸಿ, ಬಡವರ ಪರವಾಗಿ ಈ ವಿಧೇಯಕ ಸಿದ್ಧಪಡಿಸಿದ್ದೇವೆ. ಸರ್ಕಾರ ಸ್ಥಿತಿವಂತರ ಪರ ನಿಲ್ಲಬಾರದು. ವಿಧೇಯಕ ಮಂಡನೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ, ವಿಧೇಯಕದ ಬಗ್ಗೆ ಮುಂದಿನ ವಾರ ಮಾತನಾಡೋಣ ಎಂದು ಸಚಿವರನ್ನು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ