Select Your Language

Notifications

webdunia
webdunia
webdunia
webdunia

ಸಮಾಜದಲ್ಲಿರುವ ಕಂದಾಚಾರ ಓಡಿಸೋಣ: ಅಂಬೇಡ್ಕರ್ ಜಯಂತಿಗೆ ಸಿಎಂ ಕರೆ

Siddaramaiah
ಬೆಂಗಳೂರು: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ಜಯಂತಿ ಪ್ರಯುಕ್ತ ಸಂದೇಶ ನೀಡಿರುವ ಸಿಎಂ ಸಿದ್ದರಾಮಯ್ಯ ಜಾತಿ ಕಂದಾಚಾರವನ್ನು ಹೊಡೆದೋಡಿಸೋಣ ಎಂದು ಕರೆ ನೀಡಿದ್ದಾರೆ.

ಇಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜನ್ಮ ಜಯಂತಿ. ಈ ಪ್ರಯುಕ್ತ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದಿರುವ ಸಿಎಂ ಸಿದ್ದರಾಮಯ್ಯ ಬಾಬಾ ಸಾಹೇಬರ ಹುಟ್ಟು ನಮ್ಮೆಲ್ಲರ ಹುಟ್ಟನ್ನು ಅರ್ಥಪೂರ್ಣಗೊಳಿಸಿತು ಎಂದಿದ್ದಾರೆ.

‘ಶತಮಾನಗಳ ಕಾಲ ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಮುಂತಾದವುಗಳಿಂದ ವಂಚಿತವಾಗಿದ್ದ ಕೋಟ್ಯಂತರ ಶೋಷಿತ ಜನರಿಗೆ ಸ್ವಾಭಿಮಾನ,‌ ಸ್ವಾವಲಂಬನೆ ಮತ್ತು ಘನತೆಯ ಬದುಕನ್ನು ನೀಡಿದ್ದು ಬಾಬಾ ಸಾಹೇಬರ ಸಂವಿಧಾನ.

ಮೌಢ್ಯ, ಕಂದಾಚಾರ, ಜಾತಿಯಾಧಾರಿತ ಅಸಮಾನತೆಗಳೇ ತುಂಬಿಹೋಗಿದ್ದ ಭಾರತೀಯ ಸಮಾಜದಲ್ಲಿ ಪರಿವರ್ತನೆಯ ಯುಗಕ್ಕೆ ಚಾಲನೆ ನೀಡಿದ ಬಾಬಾಸಾಹೇಬರ ಹುಟ್ಟುಹಬ್ಬವನ್ನು ಅವರ ಚಿಂತನೆಯ ಅರಿವಿನೊಂದಿಗೆ ಆಚರಿಸೋಣ. ಸಮಸ್ತ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭಾಶಯಗಳು’ ಎಂದು ಸಂದೇಶ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ.. ಒಡತಿಗೆ ಸಾವು ಬಂದೆರಗುತ್ತದೆ ಎಂದು ಮೊದಲೇ ಊಹಿಸಿದ ಸಾಕು ನಾಯಿ ಮಾಡಿದ್ದೇನು ನೋಡಿ Video