Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದು ಸಿಎಂ ಸಿದ್ದರಾಮಯ್ಯರಿಂದ ಬಹುನಿರೀಕ್ಷಿತ ರಾಜ್ಯ ಬಜೆಟ್ ಮಂಡನೆ:

ಇಂದು ಸಿಎಂ ಸಿದ್ದರಾಮಯ್ಯರಿಂದ ಬಹುನಿರೀಕ್ಷಿತ ರಾಜ್ಯ ಬಜೆಟ್ ಮಂಡನೆ:
Rajesh patil , ಬುಧವಾರ, 15 ಮಾರ್ಚ್ 2017 (11:19 IST)
ಇಂದು ಬಹುನಿರೀಕ್ಷಿತ ರಾಜ್ಯ ಮುಂಗಡ ಪತ್ರವನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದು, ಕೃಷಿ, ನೂತನ ತಾಲೂಕುಗಳ ಘೋಷಣೆ, ಜಲ್ಲೆಯಿಂದ ಜಿಲ್ಲೆಗೆ ಚತುಷ್ಪತ ರಸ್ತೆಗಳು, ಅಲ್ಪಸಂಖ್ಯಾತರಿಗೆ ವಿಶೇಷ ಯೋಜನೆಗಳು, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ರಿಯಾಯಿತಿ, ನೀರಾವರಿ ಕ್ಷೇತ್ರಕ್ಕೆ ಬರಪೂರ ಕೊಡುಗೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. 
 ಹಣಕಾಸು ಸಚಿವರಾಗಿ 12ನೇ ಬಾರಿ, ಸಿಎಂ ಆಗಿ 5ನೇ ಬಾರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದು ಬೆಳಿಗ್ಗೆ 11.30ಕ್ಕೆ ಬಜೆಟ್ ಮಂಡನೆಯಾಗಲಿದೆ. ಕಳೆದ ಬಾರಿ ಬಜೆಟ್ ಗಾತ್ರ 1 ಲಕ್ಷ 45 ಸಾವಿರ ಕೋಟಿ ರೂ. ಇತ್ತು. ಈ ಬಾರಿ ಬಜೆಟ್ ಗಾತ್ರ 2 ಲಕ್ಷ  ಕೋಟಿ ರೂ. ದಾಟುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ.
 
ರೈತರು, ವಿದ್ಯಾರ್ಥಿಗಳು, ಯುವಕರನ್ನು ಆಕರ್ಷಿಸಲು ಕೆಲವು ಯೋಜನೆಗಳನ್ನು ಪ್ರಕಟಿಸುವರೆಂದು ನಿರೀಕ್ಷಿಸಲಾಗಿದ್ದು,  ಜೊತೆಗೆ  ಸರಣಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಇನ್ನಷ್ಟು ಹೆಚ್ಚಿನ ನೆರವು ಸೇರಿದಂತೆ ರೈತರ ಸಾಲ ಮನ್ನಾ ಮಾಡುವ ಸಾಧ್ಯತೆಗಳಿವೆ.
 
ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಹೊರೆ ಹೇರದೆ ಪರ್ಯಾಯ ಮೂಲಗಳಿಂದ ಹೆಚ್ಚಿನ ಆದಾಯ ಸಂಗ್ರಹಿಸುವ ಗುರಿಯನ್ನು ಸಿಎಂ ಹೊಂದಿದ್ದಾರೆ. ಬಡವರ ಮೇಲೆ ಯಾವುದೇ ಹೆಚ್ಚಿನ ತೆರಿಗೆ ಹೊರೆ ಹೇರದಿದ್ದರೂ ಮದ್ಯ, ಸಿಗರೇಟು ಸೇರಿದಂತೆ ಇತರೆ ದುಶ್ಚಟದ ವಸ್ತುಗಳಿಗೆ ಹೆಚ್ಚಿನ ತೆರಿಗೆ ಹಾಕುವ ಮೂಲಕ ದುಶ್ಚಟದ ದಾಸರ ಜೇಬಿಗೆ ಕತ್ತರಿ ಹಾಕಲಿದ್ದಾರೆ.
 
ಕೃಷಿ ಕ್ಷೇತ್ರಕ್ಕೆ ಭರಪೂರ ಕೊಡುಗೆ ಸಾಧ್ಯತೆ, ನೂತನ ತಾಲೂಕುಗಳ ಘೋಷಣೆ, ಜಿಲ್ಲೆಯಿಂದ ಜಿಲ್ಲೆಗೆ ಚತುಷ್ಪತ ರಸ್ತೆಗಳು, ಎಸ್‌.ಸಿ.ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳ ವಾರ್ಷಿಕ ಶಾಲಾ ಶುಲ್ಕ ರದ್ದು, ಅಲ್ಪಸಂಖ್ಯಾತರಿಗೆ ವಿಶೇಷ ಯೋಜನೆ , ಸಿಎಂ ಉದ್ಯೋಗ ಭಾಗ್ಯ ಯೋಜನೆ, ಇನ್ವೆಸ್ಟ್ ಕರ್ನಾಟಕ ಯೋಜನೆಯಡಿ ಯುವಕರಿಗೆ ಉದ್ಯೋಗಾವಕಾಶ, ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚು ಅನುದಾನ, ನೀರಾವರಿ ಕ್ಷೇತ್ರಕ್ಕೆ ಅನುದಾನ ಹೆಚ್ಚಳ, ಹಿಂದಿನ ಯೋಜನೆಗಳಿಗೆ ಹೆಚ್ಚು ಅನುದಾನ, ಕುಡಿಯುವ ನೀರು, ಬರನಿರ್ವಹಣೆಗೆ ವಿಶೇಷ ಪ್ಯಾಕೇಜ್, ಕ್ಷೀರಭಾಗ್ಯ 5 ದಿನಕ್ಕೆ ವಿಸ್ತರಣೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ,  ನಿವೃತ್ತ ಪತ್ರಕರ್ತರ ಮಾಸಾಶನ ಹೆಚ್ಚಳ, ಉಳ್ಳವರ ಮೇಲೆ ಟ್ಯಾಕ್ಸ್ - ಇವು ಇಂದು ಸಿಎಂ ಮಂಡಿಸಲಿರುವ ಬಜೆಟ್ ನಿರೀಕ್ಷೆಗಳಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ಬಗ್ಗೆ ಸಿಎಂ ಸಿದ್ಧರಾಮಯ್ಯ ಟ್ವೀಟ್