ಮೋದಿ, ಅಮಿತ್ ಶಾ ಎಲ್ಲಿ, ಸಿದ್ಧರಾಮಯ್ಯ ಎಲ್ಲಿ, ಮೋದಿ ಅಮಿತ್ ಶಾ ಎದುರು ಸಿದ್ಧರಾಮಯ್ಯ ಚಿಕ್ಕ ಬಾಲಕನಿದ್ದಂತೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.
ಬಿಜೆಪಿ ಕಾರ್ಯಾಲಯ ಉದ್ಘಾಟಣೆ ಹಾಗೂ ನವಶಕ್ತಿ ಸಮಾವೇಶಕ್ಕಾಗಿ ಬಾಗಲಕೋಟೆ ತಾಲೂಕಿನ ರಾಂಪೂರು ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು, ಸಿದ್ಧರಾಮಯ್ಯನವರ ಕೈಗೊಂಬೆ ಯಾಗಿ ವರ್ತಿಸುತ್ತಿದ್ದಾರೆ, ಹೀಗಾಗಿ ಸಿದ್ಧರಾಮಯ್ಯ ದುರಂಕಾರದಿಂದ ಮಾತನಾಡ್ತಿದ್ದಾರೆ, ಇದು ಬಹಳದಿನ ಉಳಿಯೋದಿಲ್ಲ ಎಂದರು.
5 ವರ್ಷ ಮುಖ್ಯಮಂತ್ರಿಯಾಗಿದ್ದೇ ಸಾಧನೆ ಎಂಬಂತೆ ವರ್ತಿಸ್ತಿರೋ ಸಿದ್ಧರಾಮಯ್ಯ ಎದುರು ಕಾಂಗ್ರೆಸ್ ಹೈ ಕಮಾಂಡ್ ವೀಕ್ ಆಗಿದೆ, ಆದ್ರೆ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ 21 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಈ ಹಿಂದೆ ರಾಹುಲ್ ಮತ್ತು ಕಾಂಗ್ರೆಸ್‌ಗೆ ಮಠಮಾನ್ಯ, ಹಿಂದು ಸ್ವಾಮೀಜಿಗಳೆಂದ್ರೆ ಅಲರ್ಜಿ ಇತ್ತು, ಈಗ ಹಿಂದೂಗಳು ತಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆಂದು, ಮಠ ಮಾನ್ಯಗಳಿಗೆ ಅಲೆದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು.
ವೀರಶೈವ ಲಿಂಗಾಯತ ಧರ್ಮ ವಿಚಾರದಲ್ಲಿ, ಸಿದ್ಧರಾಮಯ್ಯ ಧರ್ಮವನ್ನ ಒಡೆಯುವ ಆಟವಾಡಿದ್ದಾರೆ, ಇದರ ಹಿಂದಿರುವ ಬ್ರೇನ್ ಸಿದ್ಧರಾಮಯ್ಯನವ್ರದ್ದೇ ಆಗಿದೆ, ಕರ್ನಾಟಕ ಇತಿಹಾಸದಲ್ಲೇ ಸ್ವಾಮೀಜಿಗಳನ್ನ ಬೀದಿಗೆ ತರುವಂತಹ ಕೆಲಸ ಸಿದ್ಧರಾಮಯ್ಯ ಮಾಡಿದ್ದು ಇದಕ್ಕೆ ರಾಜ್ಯದ ಜನ್ರೇ ಬುದ್ದಿ ಕಲಿಸಿದ್ದಾರೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.