ಮೈಸೂರು, ಚಾಮರಾಜನಗರ ಸಹಕಾರ ಬ್ಯಾಂಕ್ ಚುನಾವಣೆ ಮುಂದೂಡಲಾಗಿದೆ. ಈ ಮೂಲಕ ಜಿ.ಟಿ.ದೇವೇಗೌಡ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ರಾ ಎಂಬ ಅನುಮಾನ ಮೂಡಿದೆ. ಅಕ್ಟೋಬರ್ 4ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಚುನಾವಣೆ ಮುಂದೂಡಿ ಜಿಲ್ಲಾಧಿಕಾರಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.. ಈ ಮೂಲಕ ಸಹಕಾರ ಕ್ಷೇತ್ರದಲ್ಲಿ G.T.ದೇವೇಗೌಡರ ಹಿಡಿತ ತಪ್ಪಿಸಲು ಸಿಎಂ ಮಾಸ್ಟರ್ ಪ್ಲ್ಯಾನ್ ಮಾಡಿದ್ರಾ ಎಂಬ ಅನುಮಾನ ಮೂಡಿದೆ. ನಿಯಮಾವಳಿಗಳ ಪ್ರಕಾರ ಮತದಾರ ಪಟ್ಟಿಯನ್ನ ತಯಾರಿಸಿಲ್ಲ ಎಂದು ದೂರು ನೀಡಲಾಗಿತ್ತು.. ಇದೀಗ ಚುನಾವಣೆ ಮುಂದೂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.. ಶಾಸಕ ಜಿ.ಟಿ.ದೇವೇಗೌಡ ಸಹಕಾರ ಮಹಾಮಂಡಲದ ಅಧ್ಯಕ್ಷರಾಗಿದ್ದಾರೆ.. ಪತ್ತಿನ ಸಹಕಾರ ಮಂಡಲದ ಅಧ್ಯಕ್ಷರಾಗಿ ಲಲಿತಾ ಜಿ.ಟಿ.ದೇವೇಗೌಡ ಇದ್ದಾರೆ. ಇನ್ನು MDCC ಬ್ಯಾಂಕ್ ಅಧ್ಯಕ್ಷರಾಗಿ ಜಿ.ಟಿ.ದೇವೇಗೌಡರ ಪುತ್ರ ಹರೀಶ್‌ಗೌಡ ಇದ್ದಾರೆ. GTD ಕುಟುಂಬ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಹೊಂದಿದೆ. ಈ ಹಿನ್ನೆಲೆ ಸಹಕಾರ ಬ್ಯಾಂಕ್ ಚುನಾವಣೆ ಮುಂದೂಡಲಾಗಿದೆ ಎನ್ನಲಾಗಿದೆ.